ಶಿರಸಿ: ಕರ್ನಾಟಕದಲ್ಲಿ ಮೂರನೇ ಮುಖ್ಯಮಂತ್ರಿ ಎಂಬುದು ಕಾಂಗ್ರೆಸ್ ಸೃಷ್ಟಿಯ ಭ್ರಮೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಪ್ರತಿಕ್ರಿಯೆ ನೀಡಿದರು.
ಅವರು ಪುರಾಣ ಪ್ರಸಿದ್ಧ ಬನವಾಸಿ ಸಮೀಪದ ಗುಡ್ನಾಪುರ ಶ್ರೀಬಂಗಾರೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಗುಡ್ನಾಪುರ ಕೆರೆಗೆ ಬಾಗೀನ ಅರ್ಪಿಸಿ ಮಾತನಾಡಿ ಬಸವರಾಜ್ ಬೊಮ್ಮಾಯಿ ಅವರು ಸಮರ್ಥವಾಗಿ ಸರಕಾರ ನಡೆಸುತ್ತಿದ್ದಾರೆ. ಬದಲಾವಣೆ ಅವಶ್ಯಕತೆ ಇಲ್ಲ. ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಕೂಡ ನಡೆಸುತ್ತೇವೆ ಎಂದರು.

ಪಕ್ಷದ ರಾಜ್ಯ ಅಧ್ಯಕ್ಷ ನಳೀನಕುಮಾರ ಕಟೀಲ ಅವಧಿ ಬಳಿಕ ಪಕ್ಷದ ತೀರ್ಮಾನವೇ ಅಂತಿಮ ವಾಗಿರುತ್ತದೆ. ವರಿಷ್ಠರು ತೀರ್ಮಾನ ಕೈಗೊಳ್ಳುವರು ಎಂದರು.
ರಾಜ್ಯದ ಹಲವಡೆ ಕೆರೆ ಕಟ್ಟೆಗಳು ತುಂಬಿವೆ. ಇದರಿಂದ ಬೆಳೆಗೆ ಅನುಕೂಲ. ಆದರೆ ಕೆಲವಡೆ ಅತಿ ಮಳೆಯಿಂದ ಸಮಸ್ಯೆ ಆಗಿದೆ. ಹಾನಿ ವರದಿಯ ಸರ್ವೆ ಆಗುತ್ತಿದೆ ವರದಿ ಬಂದ ಬಳಿಕ ಸರಕಾರ ಪರಿಹಾರ ಕೊಡಲಿದೆ ಎಂದರು.
ಕೇಂದ್ರ ಸರಕಾರ ರಾಸಾಯನಿಕ ಗೊಬ್ಬರಕ್ಕೆ ಸಬ್ಸಿಡಿ ಕೊಡುತ್ತಿದೆ. ಕೆಡಿಸಿಸಿ ಬ್ಯಾಂಕ್ ಕೂಡ 900 ಕೋ.ರೂ ಬೆಳೆ ಸಾಲ ನೀಡಿದ್ದೇವೆ. 500 ಕೋ.ರೂ. ಮಾಧ್ಯಮಿಕ ಸಾಲ ನೀಡಿದ್ದೇವೆ. ಉತ್ತರ ಕನ್ನಡದ ರೈತರಿಗೆ ತೊಂದರೆ ಆಗದಂತೆ ಕ್ರಮ ಕೂಡ ಕೈಗೊಂಡಿದ್ದೇವೆ ಎಂದರು.
ಈ ವೇಳೆ ತಹಸೀಲ್ದಾರ್ ಶ್ರೀಧರ ಮಂದಲಮನಿ ದ್ಯಾಮಣ್ಣ ದೊಡ್ಮನಿ, ಎಪಿಎಂಸಿ ಅಧ್ಯಕ್ಷ ಪ್ರಶಾಂತ ಗೌಡರ, ಮಂಗಲಾ ನಾಯ್ಕ ಸೇರಿ ಇತರರು ಇದ್ದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
