ಅಂಕೋಲಾ : ವಿದ್ಯುತ್ ವಿಧೇಯಕ 2022 ವಾಪಸ್ಸಿಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಪ್ರತಿಭಟನಾ ಸಬೆಯನ್ನು ಉದ್ದೇಶಿಸಿ ಮಾತನಾಡಿ ಕೇಂದ್ರ ಸರಕಾರ 8 ಅಗಸ್ಟ್ 2022 ರಂದು ದೇಶದ ಜನತೆಯ ಪ್ರಬಲ ವಿರೋಧದ ನಡುವೆಯು ಲೋಕಸಭೆಯಲ್ಲಿ ಮಂಡಿಸಿರುವ ವಿದ್ಯುತ್ ತಿದ್ದುಪಡಿ ವಿಧೇಯಕ 2022 ನ್ನು ಕೂಡಲೇ ವಾಪಸ್ಸು ಪಡೆಯುವಂತಾಗಬೇಕು.
ವಿದ್ಯುತ್ ವಿಧೇಯಕವು ರೈತರು, ಕಾರ್ಮಿಕರು, ಕೂಲಿಕಾರರಿಗೆ ಮಾತ್ರವಲ್ಲ ವಿದ್ಯುತ್ ಕಂಪನಿ ನೌಕರರಿಗೆ ಆಪತ್ತು ತಂದೊಡ್ಡಲಿದೆ. ನೂತನ ವಿಧೇಯಕವು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಹೊಸ ವಿಧೆಯಕವನ್ನು ವಾಪಸ್ಸಿಗೆ ಈಗಾಗಲೇ 27 ಲಕ್ಷ ವಿದ್ಯುತ್ ನೌಕರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಯುಕ್ತ ಕಿಶಾನ್ ಮೋರ್ಚಾಕ್ಕೆ ಕೊಟ್ಟ ಭರವಸೆಯನ್ನು ಉಲ್ಲಂಘಿಸಿ ತರಾತುರಿಯಲ್ಲಿ ಅಧಿವೇಶನದ ಕೊನೆಯ ದಿನ ಇಂಧನ ಸಚಿವರು ಜನವಿರೋಧಿ ವಿದ್ಯುತ್ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿರುವುದು ಖಂಡನೀಯ ಎಂದರು.
ತಾಲೂಕಾಧ್ಯಕ್ಷ ಗೌರೀಶ ನಾಯಕ ಮಾತನಾಡಿ ಈ ವಿಧೇಯಕದ ಪ್ರಕಾರ ವಿದ್ಯುತ್ ವಲಯ ಪೂರ್ಣ ಖಾಸಗೀಕರಣಗೊಳ್ಳಲಿದೆ. ಗ್ರಾಹಕರ ಕೈಗೆ ವಿದ್ಯುತ್ ಪೂರೈಕೆ ನೆಟ್ವರ್ಕ್ ಮಾದರಿಯಲ್ಲಿ ಬರಲಿ. ಪ್ರಿಪೇಡ ಮೀಟರ್ಗಳು ಬರಲಿವೆ. ಎಲ್ಲ ರೀತಿ ಸಬ್ಸಿಡಿ ವಿದ್ಯುತ್ ಪೂರೈಕೆ ನಿಲ್ಲಲಿದೆ. ಕೃಷಿಗೆ ಫ್ರೀ ವಿದ್ಯುತ್ ನಿಲ್ಲಲಿದೆ. ಕುಟೀರ ಜ್ಯೋತಿ, ಭಾಗ್ಯಜ್ಯೋತಿ ವಿದ್ಯುತ್ ನಿಲ್ಲಲಿದೆ. ವಿದ್ಯುತ್ ಕ್ಷೇತ್ರ ಕೇಂದ್ರ ಹಾಗೂ ರಾಜ್ಯದ ಸಮವರ್ತಿ ಪಟ್ಟಿಯಿಂದ ಹಿಂತೆಗೆದು ಕೇಂದ್ರ ಸರಕಾರಕ್ಕೆ ಮಾತ್ರ ಒಳಪಡಲಿದೆ. ಇದರಿಂದ ಒಕ್ಕೂಟ ವ್ಯವಸ್ಥೆ ದಕ್ಕೆ ಅಲ್ಲದೇ ರಾಜ್ಯ ಸರಕಾರಗಳ ಆದಾಯಕ್ಕೆ ಖೋತಾ ಆಗಲಿವೆ. ರಾಜ್ಯಗಳು ಹಕ್ಕು ಕಳೆದುಕೊಳ್ಳಲಿವೆ ಎಂದರು.
ಸಮಘದ ಕಾರ್ಯದರ್ಶಿ ಸಂತೋಷ ನಾಯ್ಕ, ಪ್ರಮುಖರಾದ ರಮಾನಂದ ನಾಯಕ ಅಚವೆ, ಉದಯ ನಾಯ್ಕ, ನಾಗಪ್ಪ ನಾಯ್ಕ, ಮಾದೇವ ಗೌಡ, ಗಣೇಶ ಪಟಗಾರ, ಶಿವರಾಮ ಪಟಗಾರ, ಸುಧಾಕರ ಜಾಂಬಾವಳಿಕರ, ಶ್ರೀಪಾದ ನಾಯ್ಕ, ಸುರೇಶ ನಾಯ್ಕ ಅಸ್ಲೆಗದ್ದೆ, ವಿಜು ಪಿಳ್ಳೆ, ಮೋನಪ್ಪ ನಾಯ್ಕ, ರಾಜಗೋಪಾಲ ಶೇಟ್, ಉಮಾಕಾಂತ ಗೌಡ ಸೇರಿದಂತೆ ಮೊದಲಾದರು ಉಪಸ್ಥಿತರಿದ್ದರು
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE
