ಶಿರಸಿ: ಹರ ಘರ ತಿರಂಗ ಕರ‍್ಯಕ್ರಮ ಶಿರಸಿಯಲ್ಲಿ ಯಶಸ್ವಿಗೊಳಿಸಲು ಬಿಜೆಪಿಯಿಂದ ರ‍್ಪಡಿಸಲಾಗಿದ್ದ ಬೈಕ್ ರ‍್ಯಾಲಿಗೆ ಹಿರಿಯ ಸಾಮಾಜಿಕ ಧುರೀಣ ಕಾಶನಾಥ ಮೂಡಿ ಚಾಲನೆ ನೀಡಿದರು.
ಈ ಸಂರ‍್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಕರ‍್ಯರ‍್ಶಿ ಚಂದ್ರು ಎಸಳೆ ಕೇಂದ್ರ ಸರಕಾರದ ಹರ ಘರ ತಿರಂಗ ಕರ‍್ಯಕ್ರಮದ ಉದ್ದೇಶ ಜನರಲ್ಲಿ ದೇಶ ಪ್ರೇಮ ಉಕ್ಕಿಸುವುದು. ಪ್ರಧಾನಿ ಮೋದಿಯವರು ೨೦ ಕೋಟಿ ರಾಷ್ಟ್ರ ಧ್ವಜವನ್ನು ವಿತರಣೆ ಮಾಡಿದ್ದಾರೆ. ದೇಶಕ್ಕಾಗಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ತ್ಯಾಗದಿಂದ ಬಂದ ಸ್ವಾತಂತ್ರ‍್ಯವನ್ನು ಉಳಿಸಿಕೊಳ್ಳಬೇಕಾದರೆ ನಾವೆಲ್ಲರೂ ಒಂದಾಗಿರಬೇಕೆಂದು ಹೇಳಿದರು.
ಬೈಕ್ ರ‍್ಯಾಲಿಯಲ್ಲಿ ನಗರಸಭೆ ಅದ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೆರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ್ ಸಾಗರ, ಜಿ.ಪಂ.ಮಾಜಿ ಸದಸ್ಯೆ ಉಷಾ ಹೆಗಡೆ, ನಗರ ಘಟಕದ ಅಧ್ಯಕ್ಷ ರಾಜು ಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
