ಶಿರಸಿ: ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ಅರ್ಥಪೂರ್ಣವಾಗಿ ಹಾಗೂ ರಾಷ್ಟ್ರ ಧ್ವಜಕ್ಕೆ ಎಲ್ಲಿಯೂ ಕೂಡಾ ಚ್ಯುತಿ ಬಾರದ ರೀತಿಯಲ್ಲಿ ಆಚರಣೆ ಮಾಡಬೇಕೆಂದು ಎಸಿ ದೇವರಾಜ ಆರ್ ತಿಳಿಸಿದರು.

ಅವರು ಸ್ವಾಂತಂತ್ರ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತ ಈಗಾಗಲೇ ಸರಕಾರದಿಂದ ಬಂದಿರುವ ರಾಷ್ಟ್ರಧ್ವಜದಲ್ಲಿ ಕೆಲವೊಂದು ನ್ಯೂನತೆಗಳಿರುವುದು ಕಂಡು ಬಂದಿರುವುದರಿಂದ ಅಂತಹ ಧ್ವಜಗಳನ್ನು ಸರಕಾರಿ ಕಚೇರಿಗಳಲ್ಲಿ ಹಾರಿಸಬಾರದೆಂದು ಹೇಳಿದರು. ಸರಕಾರಿ ಕಚೇರಿಗಳಲ್ಲಿ ಆ.13 ರಿಂದ  ಆ,15 ರವರಗೆ ಮೂರು ದಿನವೂ ಧ್ವಜವನ್ನು ಹಾರಿಸಿ ಸಂಜೆ ಇಳಿಸಬೇಕು. ಆದರೆ ಮನೆ ಹಾಗು ಖಾಸಗಿ ಕಟ್ಟಡ ಕಚೇರಿಗಳಲ್ಲಿ ಆ,13 ರಂದು ಧ್ವಜವನ್ನು ಹಾರಿಸಿ ಆ, 15 ರಂದು ಸಂಜೆ ಇಳಿಸಬೇಕು. ಧ್ವಜ ಹಾರಿಸುವಾಗ ಮತ್ತು ಇಳಿಸುವಾಗ ಧ್ವಜಕ್ಕೆ ಗೌರವ ಕೊಡುವುದನ್ನು ಯಾರೂ ಮರೆಯಬಾರದೆಂದು ಹೇಳಿದರು‌.

ಶ್ರೀ ಮಾರಿಕಾಂಭಾ ಜಿಲ್ಲಾ  ಕ್ರೀಡಾಂಗಣದಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ರೋಟರಿ ಕ್ಲಬ್ ಸಹಾಯವನ್ನು ಇದೇ ಸಂಧರ್ಭದಲ್ಲಿ ಕೇಳಲಾಯಿತು. ನಗರಸಭೆ ಸೇರಿದಂತೆ ಎಲ್ಲಾ ಇಲಾಖೆಯವರು ಸ್ವಾತಂತ್ರ್ಯೋತ್ಸವದ ಯಶಸ್ವಿಗಾಗಿ ತಮಗೆ ವಹಿಸಿಕೊಟ್ಟ ಕೆಲಸವನ್ನು ಜವಾಬ್ದಾರಿಯಿಂದ ಮಾಡಬೇಕೆಂದು ಹೇಳಿದರು‌. ಸಭೆಯಲ್ಲಿ ತಹಶಿಲ್ದಾರ ಶ್ರೀಧರ ಮಂದಲಮನಿ ಇದ್ದರು.

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7