ಶಿರಸಿ: ಸ್ಕೇಟಿಂಗ್ ನಲ್ಲಿ ಬಾಲಕರ ವಿಭಾಗದಲ್ಲಿ ಲಿಮ್ಕಾ ದಾಖಲೆ ಬರೆದಿರುವ ಶಿರಸಿಯ ಎಂಟು ವರ್ಷದ ಬಾಲಕ ಮಾಸ್ಟರ್ ಅದ್ವೈತ ಇದೀಗ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಧರ್ಭದಲ್ಲಿ ರಾಷ್ಟ್ರ ಗೀತೆಯನ್ನು 75 ಬಾರಿ ತಡೆ ರಹಿತವಾಗಿ ಹಾರ್ಮೋನಿಯಂನಲ್ಲಿ ಬಾರಿಸುವ ಮೂಲಕ ಅತ್ಯದ್ಬುತವಾದ ಸಾಧನೆಮಾಡಿದ್ದಾನೆ..
ಈ ಸಾಧನೆಯನ್ನು ಅದ್ವೈತ,ಹಿಂದೂ ಜಾಗರಣೆ ವೇದಿಕೆಯವರು ಅಂಜನಾದ್ರಿ ದೇವಸ್ಥಾನದಲ್ಲಿ ಸಂಘಟಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ತಮದಲ್ಲಿ ನುಡಿಸಿ ತೋರಿಸಿದ್ದಾನೆ. ಬಾಲಕನ ಸಾಧನೆ ಕಂಡು ಮೆಚ್ಚಿದ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ ಶಾಲು ಹೊದೆಸಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ತೇಲಂಗಾಣದ ಕಾಲೇಜಿನ ಪ್ರಾಂಶುಪಾಲೆಯಾದ ಪಾಂಡುಗ ಅರ್ಚನಾ ಇವರು ರಾಷ್ಟ್ರ ಗೀತೆಯನ್ನು ಸತತವಾಗಿ 75 ಬಾರಿ ಹಾಡಿ ವಿಶ್ವ ದಾಖಲೆ ನಿರ್ಮಿಸಿರುವದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
