ಶಿರಸಿ: ಕನ್ನಡ ರಾಜ್ಯೋತ್ಸವ ಸಂಧರ್ಭದಲ್ಲಿ 600 ಮೀಟರ್ ಉದ್ದದ ಕನ್ನಡ ಧ್ವಜವನ್ನು ಮಾಡಿ ಅದನ್ನು ಪ್ರದರ್ಶನ ಮಾಡುವ ಮೂಲಕ ಕನ್ನಡಾಭಿಮಾನವನ್ನು ಬಡಿದೆಬ್ಬಿಸುವಂತೆ ಮಾಡಿದ್ದ ಶಿರಸಿಯ “ರೆಡ್ ಎಂಟ್” ಸಂಘಟನೆಯವರು ಇಂದು ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಅಮೃತ ಮಹೋತ್ಸವಕ್ಕಾಗಿ 75 ಮೀಟರ್ ಉದ್ದದ ರಾಷ್ಟ್ರ ಧ್ವಜವನ್ನು ಮಾಡಿ ಜನರಲ್ಲಿ ರಾಷ್ಟ್ರ ಭಕ್ತಿ ಹೆಚ್ಚಿಸುವಂತೆ ಮಾಡಿದ್ದಾರೆ.
ಶುಕ್ರವಾರ ರೆಡ್ ಎಂಟ್ ಸಂಘಟನೆಯ ಅಧ್ಯಕ್ಷ ಮಹೇಶ ನಾಯ್ಕ ಮತ್ತವರ ತಂಡದವರು ಸೆಂಟ್ ಅಂಥೋನಿ ಪ್ರೌಢ ಶಾಲೆಯ ಮಕ್ಕಳ ಸಹಯೋಗದಲ್ಲಿ 75 ಮೀಟರ್ ಉದ್ದದ ರಾಷ್ಟ್ರ ಧ್ವಜದ ಮೆರವಣಿಗೆ ಮಾಡಿ ಜನರ ಗಮನ ಸೆಳೆದರು.
ಈ ಮೆರವಣಿಗಿಗೆ ಎಸಿ ದೇವರಾಜ್ ಆರ್ ಚಾಲನೆ ನೀಡಿದರು.ಬಳಿಕ ವಿದ್ಯಾರ್ಥಿಗಳ ಪಥ ಸಂಚಲನದೊಂದಿಗೆ ರಾಷ್ಟ್ರ ಧ್ವಜದ ಮೆರವಣಿಗೆ ಮಾಡಲಾಯಿತು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
