ವಿದ್ಯಾರ್ಥಿಗಳ ಭವಿಷ್ಯಕ್ಕೆ ಭರವಸೆಯ ಬೆಳಕಾದ ಶೈಕ್ಷಣಿಕ ಗುರುತು ಎಮ್.ಎಸ್.ಪ್ರಭು ಎಂಬ ಆಶಾಕಿರಣ
ಕಾರವಾರ ಟೈಮ್ಸ್ : ಸಾಧಕರ ನೋಟ.
ಅವಿನಾಶ ಆಗೇರ.ಅವರ್ಸಾ.
ಅಮೃತ ನಾಯ್ಕ. ಹಟ್ಟಿಕೇರಿ.
ಅಂಕೋಲಾ: ತಾಲೂಕಿನ ಅವರ್ಸಾದಲ್ಲಿ ಸಾಂಸ್ಕøತಿಕ, ಶೈಕ್ಷಣಿಕ, ಧಾರ್ಮಿಕ ಯಾವುದೇ ಕಾರ್ಯಕ್ರಮಗಳು ಘಟಿಸಲಿ ಆ ವೇದಿಕೆಗೆ ಗೌರವ ಸೂಚಕ ಸ್ಥಾನವನ್ನು ತುಂಬುತ್ತಿದ್ದ ವ್ಯಕ್ತಿತ್ವ ಅವರದು. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಎಲ್ಲಾ ತರಹದ ನೆರವು ನೀಡಿ ಅವರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಶೈಕ್ಷಣಿಕ ತಜ್ಞ.ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಬಾಧಿಸದಂತೆ ದಾನಿಗಳ ಸಹಾಯದಿಂದ ಶಾಲೆಗಳಿಗೆ ಮರುಜೀವ ತುಂಬುತ್ತಿದ್ದ ಶೈಕ್ಷಣಿಕ ಮಹಾನ್ ಪ್ರೇಮಿ. ತನ್ನ ಮಾತೃಸ್ಥಾನವನ್ನು ಸಾಕ್ಷಾರತೆಯ ಹಸಿರಿನಿಂದ ಕಂಗೊಳಿಸಬೇಕೆಂದು ಪಣತೊಟ್ಟು ಶಿಕ್ಷಣಾಭಿವೃದ್ಧಿಯಲ್ಲಿ, ಯಶಸ್ಸಿನ ಪರಿಮಳ ಬೀರಿದ ಶೈಕ್ಷಣಿಕ ಕುಸುಮ.ಇಂತಹ ಅಪರೂಪವ ಮಹಾನ್ ಸಾದಕನೆ 81 ವರ್ಷ ಇಳಿವಯಸ್ಸಿನ ಆದರ್ಶ ಶಿಕ್ಷಕ ಎಮ್.ಎಸ್.ಪ್ರಭು.
ಶೈಕ್ಷಣಿಕ ಹಿನ್ನೆಲೆ:
ಅವರ್ಸಾದಲ್ಲಿ 1941 ನವೆಂಬರ 18 ರಂದು ಜನಿಸಿದ ಎಮ್.ಎಸ್.ಪ್ರಭು ಅವರ್ಸಾದಸ.ಮಾ.ಗಂಡು ಮಕ್ಕಳ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಶ್ರೀ ಕಾತ್ಯಾಯನಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಪಡೆದು ಮುಂದೆ ಕರ್ನಾಟಕ ಆರ್ಟ್ಸ್ ಕಾಲೇಜ್ ಧಾರವಾಡದಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ ಇವರು, 1963ರಲ್ಲಿ ತಾವು ಕಲಿತ ಕಾತ್ಯಾಯನಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನೇಮಕಗೊಂಡರು.
1965-66ರಲ್ಲಿ ಸರಕಾರಿ ಕಾಲೇಜ್ ಜಮಖಂಡಿಯಲ್ಲಿ ಬಿ.ಎಡ್ ಶಿಕ್ಷಣವನ್ನು ಪೂರೈಸಿ, ಶಿವಾಜಿ ಯುನಿವರ್ಸಿಟಿ ಕೊಲ್ಲಾಪುರದಲ್ಲಿ ಎಮ್.ಎ ಪದವಿಯನ್ನು ಪಡೆದರು.ಮುಂದಿನ ದಿನಗಳಲ್ಲಿ ಕಾತ್ಯಾಯನಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾಗಿ ಪದೋನ್ನತಿ ಹೊಂದಿದರು.(1992-99). 1999 ನವೆಂಬರ್‍ನಲ್ಲಿ ನಿವೃತ್ತಿ ಜೀವನಕ್ಕೆ ಕಾಲಿಟ್ಟು, ತಮ್ಮ ವೃತ್ತಿಜೀವನದ ಸಮಯದಲ್ಲಿ ಹಾಗೂ ಇಲ್ಲಿಯವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಪ್ರಗತಿಪರ ಚಟುವಟಿಕೆಗಳನ್ನು ಕೈಗೊಂಡು ಜನಮನದಲ್ಲಿ ಪೂಜನೀಯ ಸ್ಥಾನವನ್ನು ಪಡೆದಿದ್ದಾರೆ.ನಾಮಾಂಕಿತದ ಮನಮೋಹನ ಸೋಯರು ಪ್ರಭು.
ಶೈಕ್ಷಣಿಕ ನೆರವಿಗೆ ಪಾರದರ್ಶಕ ಮಾದ್ಯಮ :
ಕಳೆದ 21 ವರ್ಷಗಳಿಂದ ಅವರ್ಸಾ ಮೂಲದ ಮುಂಬೈ ನಿವಾಸಿ ಉಲ್ಲಾಸ ಕಲ್ಗುಟ್ಕರ್ ಅವರು ಅವರ್ಸಾ, ಹಾರವಾಡ, ಹಟ್ಟಿಕೇರಿ ಗ್ರಾಂಪಂ ವ್ಯಾಪ್ತಿಯಲ್ಲಿನ ಸುಮಾರು 17 ಸರಕಾರಿ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷಜೂನ್ ತಿಂಗಳಲ್ಲಿ ಒಟ್ಟು 40 ಸಾವಿರ ಮೌಲ್ಯದ ನೋಟ್ ಬುಕ್ ವಿತರಿಸುತ್ತಿದ್ದು, ಪ್ರತಿವರ್ಷ ನವೆಂಬರ್‍ನಲ್ಲಿ 17 ಶೈಕ್ಷಣಿಕ ಸಂಸ್ಥೆಗಳ ಕೊನೆಯ ವರ್ಷದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಮತ್ತು 2 ಬಡ ವಿದ್ಯಾರ್ಥಿಗಳಿಗಂತೆ ಒಟ್ಟು 72 ವಿದ್ಯಾರ್ಥಿಗಳಿಗೆ 25 ಸಾವಿರ ನಗದು ಬಹುಮನ ನೀಡುತ್ತಾ ಬಂದಿದ್ದಾರೆ. ಪ್ರತಿವರ್ಷ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಹಾಗೂ ಬಡ ಪ್ರತಿಭೆಗಳ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯಒದಗಿಸುತ್ತಾ ಬಂದಿದ್ದ ಅವರ ಈ ಎಲ್ಲಾ ಶೈಕ್ಷಣಿಕ ಪ್ರೇಮಕ್ಕೆ ಪಾರದರ್ಶಕ ಮಾದ್ಯಮವಾಗಿ ನಿಂತವರು ಎಮ್‍ಎಸ್ ಪ್ರಭು.

ಪ್ರತಿಭೆಗಳಿಗೆ ದಾರಿದೀಪ
ಅವರು ವೈಯಕ್ತಿಕವಾಗಿ 17 ಶೈಕ್ಷಣಿಕ ಸಂಸ್ಥೆಗಳ ಕೊನೆಯ ವರ್ಷದ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಒಟ್ಟಾರೆಯಗಿ 12 ಸಾವಿರರೂಪಾಯಿ ನಗದು ಬಹುಮಾನವನ್ನು ಅವರ್ಸಾ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯಕ್ರಮದ ಮೂಲಕ ನೀಡುತ್ತಿರುತ್ತಾರೆ.ತಾಲೂಕಿನತಮ್ಮ ಸಮುದಾಯದ ಕಾಲೇಜು ಶಿಕ್ಷಣ ಪಡೆಯುವ ಅರ್ಹ ಬಡ ವಿದ್ಯಾರ್ಥಿಗಳಿಗೆ ಲಕ್ಷ್ಮೀನಾರಾಯಣ ವರ್ಧಮಾನ ಮಹೋತ್ಸವ ಕಮಿಟಿ ಅವರ್ಸಾ ಮೂಲಕ 3 ಲಕ್ಷರೂಪಾಯಿಯನ್ನು ಪ್ರತಿ ವರ್ಷ ನೀಡುತ್ತಿದ್ದಾರೆ.
ಹಲವು ಸ್ಥಾನಗಳನ್ನು ಅಲಂಕರಿಸಿದ ಅಭಿವೃದ್ಧಿಯ ಹರಿಕಾರ
ಶೈಕ್ಷಣಿಕಾಸಕ್ತರಾಗಿದ್ದ ಇವರು ಹಲವು ಮಹತ್ತರ ಸ್ಥಾನಗಳನ್ನು ಅಲಂಕರಿಸಿದ್ದರು.ಸಾಕ್ಷಾರತಾ ಆಂದೋಲನದಲ್ಲಿ ಮಂಡಳ ಸಮನ್ವಯ ಅಧಿಕಾರಿಯಾಗಿ, ಕನ್ನಡ ನಾಡು ಸಾಕ್ಷಾರತಾ ಆಂದೋಲನದಲ್ಲಿ ಜಿಲ್ಲಾ ಸಂಪನ್ಮೂಲ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಶ್ರೀ ಕಾತ್ಯಾಯನಿ ಪ್ರೌಢಶಾಲೆಯಲ್ಲಿನ ಟ್ರಸ್ಟಿಯಾದ ಇವರು ಅವರ್ಸಾ ಪ.ಪೂ.ಕಾಲೇಜಿನ ಶಾಲಾ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ,ಕಾತ್ಯಾಯನಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘ ಹಾಗೂ ಅವರ್ಸಾಗಂಡು ಮಕ್ಕಳ ಶಾಲೆಯ ಹಳೆ ವಿದ್ಯಾರ್ಥಿ ಸಂಘಮತ್ತುಅವರ್ಸಾಗಂಡು ಮಕ್ಕಳ ಶಾಲೆಯ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೀರ್ತಿಇವರದ್ದಾಗಿದೆ.

1972 ರಿಂದ 2017 ರವರೆಗೆ ಲಕ್ಷ್ಮೀನಾರಾಯಣ ಉತ್ಸವ ಕಮಿಟಿಯ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.ಲಕ್ಷ್ಮೀನಾರಾಯಣ ಸೇವಾ ಭವನ ವರ್ಧಮಾನ ಕಮಿಟಿಯ ಸಂಸ್ಥಾಪಕ ಸದಸ್ಯರಾಗಿಯು ಧಾರ್ಮಿಕಕ್ಷೇತ್ರದಲ್ಲಿ ತಮ್ಮ ಅಪೂರ್ವಕೊಡುಗೆ ನೀಡಿದ ಗೌರವಕ್ಕೂ ಪಾತ್ರರಾಗಿದ್ದಾರೆ.
ಗ್ರಾಮೀಣ ಮಟ್ಟದಲ್ಲಿ ಶೈಕ್ಷಣಿಕಅಭಿವೃದ್ಧಿ ಸಾಧಿಸಿದರೆ, ದೇಶದ ಪ್ರಗತಿಕೂಡ ಸಾಧ್ಯ.ನಮ್ಮಕಾಲದಲ್ಲಿ ಉನ್ನತ ಶಿಕ್ಷಣ ಪಡೆದವರೆಲ್ಲಾ ಉದ್ಯೋಗಕ್ಕಾಗಿ ಮುಂಬೈ ತೆರಳಿದರೆ, ನಾನೊಬ್ಬನೆ ಊರಲ್ಲಿ ವೃತ್ತೀಜೀವನ ಪ್ರಾರಂಭಿಸಿ ಊರಿನ ಬೇಳವಣಿಗೆಯ ಕಡೆ ಗಮನಹರಿಸಿದ್ದೆ.ಈ ನನ್ನ ನಿರ್ಧಾರ ಇಂದು ನನಗೆ ಆತ್ಮತೃಪ್ತಿ ನೀಡಿದೆ.
ಎಮ್.ಎಸ್.ಪ್ರಭು
ಆದರ್ಶ ಶಿಕ್ಷಕ: ಶೈಕ್ಷಣಿಕ ಪ್ರೇರಕ
ಅವರು ಒಬ್ಬ ಉತ್ತಮ ಶಿಕ್ಷಕ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ವ್ಯಕ್ತಿತ್ವದವರು. ಶೈಕ್ಷಣಿಕ ಪ್ರೇಮಿಯಾಗಿ ಹಲವು ದಾನಿಗಳನ್ನು ಒಗ್ಗೂಡಿಸಿ ಗ್ರಾಮೀಣ ಪ್ರತಿಭೆಗಳಿಗೆ ಆರ್ಥಿಕ ಸಹಾಯ ಮಾಡಿ ಶೈಕ್ಷಣಿಕವಾಗಿ ಹುರಿದುಂಬಿಸಿದ್ದಾರೆ. ಸ.ಕಿ.ಪ್ರಾ.ಶಾ. ತಾರಿಬೊಳೆ, ಸ.ಪ್ರಾ.ಶಾ. ದಂಡೇಭಾಗ ಹಾಗೂ ಪ.ಪೂ. ಕಾಲೇಜು ಅವರ್ಸಾ ಕಟ್ಟಡ ನಿಮಾರ್ಣಕ್ಕೆ ಸ್ಥಳ ಸಿಗುವಲ್ಲಿ ಇವರ ಪಾತ್ರ ಅನನ್ಯ.
ಮಂಗಲದಾಸ ಕಾಮತ್
ಮಾಲಕರು ಕಾಮತ್ ಪ್ಲಸ್ ಗ್ರೂಪ್ಸ್.
ಶೈಕ್ಷಣಿಕ ನೇತಾರ: ಸರಳಜೀವಿ
ಎಮ್.ಎಸ್.ಪ್ರಭು ಎಂದರೆ ಊರಿನ ಹೆಮ್ಮೆಯ ಪ್ರತೀಕ. ಅವರ್ಸಾಗಂಡು ಮಕ್ಕಳ ಶಾಲೆಗೆ ಹಳೆ ವಿದ್ಯಾರ್ಥಿ ಸಂಘದ ಮೂಲಕ ಕಂಪ್ಯೂಟರ್ ಶಿಕ್ಷಕ, ಸ್ಪೋಕನ್ ಇಂಗ್ಲೀಷ್ ಶಿಕ್ಷಕರ ನೇಮಕಾತಿ ಮತ್ತು 7ನೇ ತರಗತಿಯಲ್ಲಿ ಉತ್ತೀರ್ಣರಾದ 5 ಬಡ ವಿದ್ಯಾರ್ಥಿಗಳ ಮುಂದಿನ ಶಿಕ್ಷಣವನ್ನು ನೋಡಿಕೊಂಡಿದ್ದಾರೆ.ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹುಟ್ಟು ಹಾಕುವುದರ ಮೂಲಕ ಶೈಕ್ಷಣಿಕ ಅಭಿವೃದ್ಧಿ ಸಾಧಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ.
ತುಳಸಿದಾಸ್ ಕಾಮತ್
ಉದ್ಯಮಿಗಳು ಅವರ್ಸಾ
ನಡೆದಾಡುವ ವಿಶ್ವಕೋಶ: ಮಾರ್ಗದರ್ಶಕ
ಯುವಕರಲ್ಲಿಯೂ ಇಲ್ಲದ ಉತ್ಸಾಹ, ಇಳಿವಯಸ್ಸಿನಲ್ಲೂ ಆ ಮಹಾನ್ ವ್ಯಕ್ತಿಗಿದ್ದು, ಶೈಕ್ಷಣಿಕ ಪ್ರಗತಿಗಾಗಿ ದಾನಿಗಳನ್ನು ಸೇರಿಸಿ ಅನೇಕ ವಿದ್ಯಾರ್ಥಿಗಳ ಭವಿಷ್ಯ ಬೆಳಗಲು ಕಾರಣೀಭೂತರಾಗಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕುಂದು ಕೊರತೆಗಳಿದ್ದರೆ, ತ್ವರಿತವಾಗಿ ಸ್ಪಂದಿಸಿ ಪರಿಹಾರ ದೊರಕುವರೆಗೂ ಜವಾಬ್ದಾರಿ ವಹಿಸುವ ಅವರ ಕಾರ್ಯಪ್ರವತ್ತತೆ ನಿಜಕ್ಕೂಅಭಿನಂದಾರ್ಹ.ಅವರಿಗೆ ಶಿಕ್ಷಣದ ಮೇಲಿದ್ದ ಪ್ರೀತಿ ಕಾಳಜಿ ನನ್ನಲ್ಲೂ ಶೈಕ್ಷಣಿಕ ಪ್ರೇಮ ಮೂಡಲು ಹುರಿದುಂಬಿಸಿದೆ.
ಲಕ್ಷ್ಮೀ ನಾಯಕ
ಶಿಕ್ಷಕರು ಸ.ಮಾ.ಗ.ಮ. ಶಾಲೆ ಅವರ್ಸಾ
ಪ್ರಶಸ್ತಿಗೆ ಗೌರವತರುವ ವ್ಯಕ್ತಿತ್ವ;
ಊರಿನ ಶಿಕ್ಷಣ ಕಿರೀಟ
ಶೈಕ್ಷಣಿಕ ಅಭಿವೃದ್ಧಿಯ ಹಾದಿಯಲ್ಲಿ ಸಾಗಿರುವ ಅವರಿಗೆ ನೂರಾರು ಪ್ರಶಸ್ತಿಗಳು ಅರಸಿ ಬಂದಿವೆ. ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ಕೊಗ್ರೆ ಪ್ರಶಸ್ತಿ, ಮುಂಬೈನ ನಿರ್ಮಾಲ್ಯಚಾರಿಟಿಟ್ರಸ್ಟ ನಿಂದ ಸಮಾಜ ಸೇವಕ ಪ್ರಶಸ್ತಿ, ಬಾರದೇಶಕರ್ ಪುರಸ್ಕಾರ ಮುಂತಾದ ಪ್ರಶಸ್ತಿಗಳು ಈ ಸಾಲಿನ್ನಲ್ಲಿದೆ. ಅವರ ಅಪೂರ್ವ ವ್ಯಕ್ತಿತ್ವಕ್ಕೆ ರಾಜ್ಯೋತ್ಸವ ಪ್ರಶಸ್ತಿಗಳು ಅರಸಿ ಬರುವಂತಾಗಬೇಕು.ಮಾರುತಿ ನಾಯ್ಕಅವರ್ಸಾ
ಶಿಕ್ಷಕ ಪದಕ್ಕೆ ಗೌರವ ತೂಕದ ನಾಮಾಂಕಿತ
ಅವರ ಶಿಷ್ಯ ಬಳಗದಲ್ಲಿ ನಾನು ಕೂಡ ಒಬ್ಬನೆಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಶಿಕ್ಷಕನೆಂದರೆ ಕೇವಲ ಪಾಠಕ್ಕೆ ಸೀಮಿತನಾಗದೆ ಸಾಕ್ಷರತಾ ಆಂದೋಲನದಲ್ಲಿ ಚಿಕ್ಕದಾದ ಕೊಡುಗೆಯನ್ನಾದರೂ ಸಲ್ಲಿಸಬೇಕು ಎಂಬುದನ್ನು ತೋರಿಸಿಕೊಟ್ಟವರು. ಶಿಕ್ಷಕ, ಶಿಕ್ಷಣ, ಶೈಕ್ಷಣಿಕ ಪ್ರಗತಿಎಂದರೆ ನೆನಪಿಗೆ ಬರುವ ಹೆಸರೇ ಎಂ.ಎಸ್.ಪ್ರಭು.
ಶ್ರೀಧರ ಜಿ.ಮೇತ್ರಿ
ಕಲಾ ಶಿಕ್ಷಕರು ಶ್ರೀ ಕಾತ್ಯಾಯನಿ ಪ್ರೌಢಶಾಲೆಅವರ್ಸಾ
ಊರಿಗೆ ಪತ್ರಿಕೆ ಪರಿಚಯಿಸಿದ ಜ್ಞಾನಿ
ಅವರಿಗೆ ಶಿಕ್ಷಣದ ಮೇಲಿದ್ದ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ. ಆ ಒಂದುಕಾಲದಲ್ಲಿ ತಾಲೂಕಿನ ಸಿಮೀತವಾಗಿದ್ದ ದಿನಪತ್ರಿಕೆಗಳು ನಮ್ಮಉರಿನಲ್ಲಿಯೂ ಓಡಾಡುವಂತೆ ಮಾಡಿದ ಅವರ ಮುಂದಾಲೋಚನೆ ಊಹೆಗೂ ಕಷ್ಟ.ಸುಮಾರು 45 ವರ್ಷಗಳ ಕಾಲ ದಿನಪತ್ರಿಕೆಗಳ ಏಜೆನ್ಸಿ ನಡೆಸಿ ಜನರಲ್ಲಿ ಅಕ್ಷರ ಪ್ರೇಮವನ್ನು ಮೂಡಿಸಿದ ಶ್ರೇಷ್ಠ ವ್ಯಕ್ತಿ.
ನಾಗೇಂದ್ರ ನಾಯ್ಕ
.ಪಿ.ಡಿ.ಓ.ಗ್ರಾಪಂ ಅಮದಳ್ಳಿ.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE
