ಜೋಯಿಡಾ:  ತಾಲೂಕಿನ ಗಡಿ ಗ್ರಾಮ ಜೋಯಿಡಾ ಕೇಂದ್ರದಲ್ಲಿನ  ಕನ್ನಡ ಭವನದಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಮೃತ ಮಹೋತ್ಸವವನ್ನು  ಆಚರಿಸಲಾಯಿತು.    

ಜೋಯಿಡಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಾಂಡುರಂಗ ಪಟಗಾರ  ಧ್ವಜಾರೋಹಣ ನೆರವೇರಿಸಿದರು.  ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಭವನದಲ್ಲಿ ಇದು ಮೊಟ್ಟಮೊದಲ ರಾಷ್ಟ್ರ ಧ್ವಜಾರೋಹಣ ಆಗಿತ್ತು.

ಈ ಸಂದರ್ಭದಲ್ಲಿ ಆಜೀವ ಸದಸ್ಯರಾದ ಕಾಳಿ ಬ್ರಿಗೇಡ್ ಮುಖ್ಯಸ್ಥ ರವಿ ರೆಡ್ಕರ,  ಜೋಯಿಡಾ ಕೇಂದ್ರ ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷ ಶ್ಯಾಮ ಪೋಕಳೆ,  ಕ.ಸಾ.ಪ. ಮಾಜಿ ಅಧ್ಯಕ್ಷ ಸುಭಾಷ್ ಗಾವಡಾ,  ಕ.ಸಾ.ಪ ಪದಾಧಿಕಾರಿಗಳಾದ  ಕಾರ್ಯದರ್ಶಿ ಭಾಸ್ಕರ ಗಾಂವ್ಕರ್, ಖಜಾಂಚಿ ಮಹಾದೇವ ಹಳದನಕರ, ಪಾಂಡುರಂಗ ಗಾವಡಾ,  ದಯಾನಂದ ಗಾವಡಾ, ಕಾಲೇಜು ವಿದ್ಯಾರ್ಥಿಗಳು, ಪಾಲ್ಗೊಂಡಿದ್ದರು.

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/FwQPbtH4lkpE71sGaWxRXj