ಶಿರಸಿ:ಇಲ್ಲಿನ  ಖಾಜಿಗಲ್ಲಿಯಲ್ಲಿ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದು ಮನೆಯಲ್ಲಿದ್ದ ವೃದ್ದೆ ಹಂಚು ಪಕಾಸು ಗೋಡೆ ಕಲ್ಲಿನ ಅಡಿಯಲ್ಲಿ ಸಿಲುಕಿದ್ದರೂ ಸಣ್ಣಪುಟ್ಟ ಗಾಯದೊಂದಿಗೆ ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ.ಇನ್ನೊಂದೆಡೆ ಮನೆಯ ಇನ್ನೊಂದು ಗೋಡೆ ಮನೆಯ ಹೊರಗಡೆ ಇಡಲಾಗಿದ್ದ ಎರಡು ಬೈಕ್ ಗಳ ಮೇಲೆ ಬಿದ್ದಿದ್ದರಿಂದ ಬೈಕಗಳು ನುಜ್ಜುಗುಜ್ಜಾಗಿ ಹೋದ ಘಟನೆ ನಡೆದಿದೆ. ಸುಮಾರು 80 ವರ್ಷದ ವೃದ್ದೆ ಬಶಿರಾಬಿ ಜೀವಾಪಾಯದಿಂದ ಪಾರಾದ ಮಹಿಳೆಯಾಗಿದ್ದಾಳೆ.

ಮನೆಯಲ್ಲಿ ಒಂಟಿಯಾಗಿ ಇರುತ್ತಿದ್ದ ಈ ಮಹಿಳೆಯು ಇಂದು ಮದ್ಯಾಹ್ನ ಊಟಮಾಡಿ ಮನೆಯಲ್ಲಿ ಮಲಗಿದ್ದಳು. ಆಗ ಮನೆ ಏಕಾಏಕಿ ಕುಸಿದು ಬಿದಿದ್ದರಿಂದ ವೃದ್ಧೆಯು ಮುರಿದು ಬಿದ್ದಿದ್ದ ಹಂಚು ಪಕಾಸು ಕಲ್ಲಿನ ಅಡಿಯಲ್ಲಿ ಸಿಲುಕಿಕೊಂಡಿದ್ದಳು.ಇದನ್ನು ನೋಡಿದ ಅಕ್ಕಪಕ್ಕದ ಜನರು ಆ ವೃದ್ಧೆಯನ್ನು ರಕ್ಷಿಸಿ ಸರಕಾರಿ ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7