ಜೋಯಿಡಾ- ತಾಲೂಕಿನ ಕುಂಬಾರವಾಡಾ ಕ್ಲಸ್ಟರ ಮಟ್ಟದ 2022-23 ನೇ ಸಾಲಿನ ಕ್ರೀಡಾಕೂಟವನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ವಿಜಯಲಕ್ಷ್ಮಿ ಡೇರೆಕರ ಗಡಿ ಗ್ರಾಮ ಕುಂಡಲದಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಡಿ ಗ್ರಾಮಿಣ ಪ್ರದೇಶದಲ್ಲಿ ಕನ್ನಡ ಸುಭದ್ರವಾಗಿದೆ. ಹಿಂದುಳಿದ ವಿಧ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದು ಮತ್ತು ಶಿಕ್ಷಕರ ಕಾಳಜಿ ಅಭಿನಂದನಾರ್ಹವಾಗಿದೆ. ಗಡಿ ಗ್ರಾಮವಾದ ಕುಂಡಲ್ ಗ್ರಾಮದಲ್ಲಿ ಕ್ರೀಡೆ ಸಂಘಟಿಸಿದ ಶಿಕ್ಷಕ ವರ್ಗ, ಶಿಕ್ಷಣ ಇಲಾಖೆಗೆ  ವಂದನೆಗಳು ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಆಕಾಶ ಅನಸ್ಕರ, ಆರ್. ಎಪ್.ಓ ಶಶಿಧರ ಗೌಡ ಪಾಟೀಲ, ಶಿಕ್ಷಕ ಸಂಘದ ಅ.ಯಶವಂತ ನಾಯ್ಕ, ದೈಹಿಕ ಶಿಕ್ಷಕ ಅಂಬಿಗ ಗ್ರಾಮದ ಬುಧವಂತ ಗಣಪತಿ ವೆಳಿಪ, ಪ್ರಮುಖರಾದ ರಮೇಶ ವೆಳಿಪ, ಸುಭಾಷ ಗಾವಡಾ, ಉಮೇಶ ವೆಳಿಪ, ಹರಿಶ ಮಧುರೆಡ್ಡಿ, ಕ.ಸಾ.ಪ ಖಜಾಂಚಿ ಮಹಾದೇವ ವೆಳಿಪ, ಸಿ. ಆರ್.ಪಿ ಭಾಸ್ಕರ ಗಾಂವಕರ ನಿರೂಪಿಸಿದರು, ಮುಖ್ಯಶಿಕ್ಷಕ ಪ್ರವಿಣ ಪಾವಸ್ಕರ ಸ್ವಾಗತಿಸಿದರು, 12 ಹಿರಿಯ ಪ್ರಾಥಮಿಕ ಶಾಲೆಗಳಿಂದ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/FwQPbtH4lkpE71sGaWxRXj