ಶಿರಸಿ- ಮೊದಲೊಂದು ಕಾಲವಿತ್ತು ಬಡವನಿರಲಿ ಶ್ರೀಮಂತನಿರಲಿ ಒಬ್ಬೊರಿಗೊಬ್ಬರು ಹಂಚಿ ತಿನ್ನುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ನಯಾ ಪೈಸೆಗೂ ಜೀವ ಬಿಡುವ ಕಾಲ ಬಂದಿದೆ. ನಾನೊಬ್ಬನೇ ಹಣ ಅಂತಸ್ತು ಗಳಿಸಬೇಕೆನ್ನುವ ಹುಚ್ಚು ಆಸೆಯಲ್ಲಿ ಜನರ ಪ್ರೀತಿ ವಿಶ್ವಾಸ ಕಳೆದುಕೊಂಡು ಕೊನೆಯಲ್ಲಿ ಕಾಲನದ ಕರೆಯಲ್ಲಿ ಅಂತ್ಯವಾಗುತ್ತಿದ್ದಾನೆ. ಇದಕ್ಕೆಲ್ಲಾ ಅಪವಾದ ಎಂಬಂತಿದ್ದಾರೆ ಶಿರಿಸಿಯ ಮಾರಿಗುಡಿ ದೇವಾಲಯದ ಎದುರು ಪ್ರತಿ ನಿತ್ಯ ಬೇಡಲು ಬರುತ್ತಿರುವ ತ್ರಿಮೂರ್ತಿ ಕಡು ಬಡತನದ ಜೋಗಮ್ಮಂದಿರು.

ಇವರ ಹೆಸರು ದ್ಯಾಮವ್ವ,ಗಂಗವ್ವ ಹಾಗು ತಿಮ್ಮವ್ವ.ಇವರು ತಮಗೆ ಅರಿವಿಲ್ಲದೆಯೇ ಜಗತ್ತಿಗೊಂದು ಸ್ಪಷ್ಟವಾದ ಸಂದೇಶ ನೀಡುತ್ತಿದ್ದಾರೆ.ಅದೇನೆಂದರೆ ಕೂಡಿ ಬಾಳಿದರೆ ಸ್ವರ್ಗ ಸುಖ ಹಂಚಿ ತಿಂದರೆ ಪರಮ ಸುಖ ಎಂದು. ಹಣ ಅಂತಸ್ತಿಗಾಗಿ ಕಚ್ಚಾಡುತ್ತಿರುವ ಇಂದಿನ ಜಗತ್ತಿನಲ್ಲಿ ಈ ಸಂದೇಶವನ್ನು ನಾವು ಭಿಕ್ಷುಕರಿಂದ ಕಲಿಯಬೇಕಾಗಿರುವುದು ನಮ್ಮ ದುರ್ದೈವವೇ ಸರಿ. ಈ ಮೂವರು ಜೋಗಮ್ಮಂದಿರು ಒಂದೇ ಕುಟುಂಬದವರಲ್ಲ ಸಂಬಂಧಿಗಳೂ ಅಲ್ಲ. ಆದರೆ ಬೇಡಿ ಬಂದ ಹಣದಲ್ಲಿ ಆಹಾರದಲ್ಲಿ ಎಷ್ಟೇ ಕಷ್ಟ ಬಂದರೂ ಹಂಚಿ ತಿನ್ನುವ ಗುಣ ಬೆಳೆಸಿಕೊಂಡಿದ್ದಾರೆ. ಬೇಡುವಾಗ ಒಬ್ಬರಿಗೆ ಸಿಗಬಹುದು ಇನ್ನೊಬ್ಬರಿಗೇ ಸಿಗದೇನೂ ಇರಬಹುದು. ಸಿಕ್ಕವರು ಸಿಗದಿದ್ದವರಿಗೆ ಹಂಚಿ ತಿನ್ನುತ್ತಾರೆ ಮತ್ತು ಅದರಲ್ಲಿ ತೃಪ್ತಿ ಪಟ್ಟಿಕೊಳ್ಳುತ್ತಾತ್ತಿದ್ದಾರೆ.

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7