ಶಿರಸಿ: ಮೇಲ್ದರ್ಜೆಗೆರಿರುವ ಶಿರಸಿಯ ಸಾರ್ವಜನಿಕ ಪಂಡಿತ ಆಸ್ಪತ್ರೆಯಿಂದ ಯಲ್ಲಾಪುರ ನಾಖಾವರೆಗಿನ ರಸ್ತೆಯನ್ನು ಅಗಲಿಕರಣಗೊಳಿಸುವ ನಿಟ್ಟಿನಲ್ಲಿ ನಗರಸಭೆ ಎದುರಿಗಿರುವ ಬೃಹತ್ ಗಾತ್ರದ ನಾಲ್ಕು ನೀಲಗಿರಿ ಮರವನ್ನು ಶುಕ್ರವಾರ ತೆಗೆಯಲಾಯಿತು.
ನೂರಕ್ಕೂ ಹೆಚ್ಚಿನ ವರ್ಷದ ಇತಿಹಾಸವಿದ್ದ ಈ ಮರವನ್ನು ತೆಗೆಯುವಾಗ ಎರಡು ಜೆಸಿಬಿಯನ್ನು ಬಳಸಿ ತೆಗೆಯಲಾಯಿತು. ಮರ ಬೀಳುವ ದೃಶ್ಯವನ್ನು ನೋಡಲು ನೂರಾರು ಜನರು ಜಮಾಯಿಸಿದ್ದರು. ಮರವನ್ನು ರಸ್ತೆಯ ನಡುವೆಯೇ ಬೀಳಿಸುವ ಅನಿವಾರ್ಯತೆ ಇದ್ದದ್ದರಿಂದ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ವ್ಯಕ್ತಿಯೋರ್ವ ತನ್ನ ಬೈಕನ್ನು ಯಮಾ ಶೋ ರೂಮಿನ ಮುಂಭಾಗದಲ್ಲಿಟ್ಟು ಮರೆತು ಮರ ಕಡಿಯುವುದನ್ನು ನೋಡುತಿದ್ದನು. ಆದರೆ ಮರ ಮುರಿದು ಬೈಕಿನ ಮೇಲೆ ಬಿದ್ದಿದ್ದರಿಂದ ಬೈಕ್ ಸಂಪೂರ್ಣವಾಗಿ ಜಖಂಗೊಂಡ ಘಟನೆ ನಡೆಯಿತು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
