ಶಿರಸಿ: ಇಂದಿನ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವುದರ ಮೂಲಕ ಮೌಡ್ಯದಿಂದ ಹೊರಗೆ ಬರಬೇಕೆಂದು ಪ್ರಧಾನ ಜಿಲ್ಲಾ ಹಾಗು ಸತ್ರ ನ್ಯಾಯದೀಶರು ಹಾಗೂ  ಶ್ರೀ ಮಾರಿಕಾಂಭಾ ದೇವಲಾಯದ ನಿಯಂತ್ರಣಾಧಿಕಾರಿಗಳಾದ ಡಿ ಎಸ್ ವಿಜಯಕುಮಾರ ತಿಳಿಸಿದರು.

ಅವರಿಂದು ಮಾರಿಕಾಂಭಾ ದೇವಸ್ಥಾನದ ಸಭಾಭವನದಲ್ಲಿ ಎಸ್ ಎಸ್ ಎಲ್ ಸಿ ಮತ್ತು  ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ 962 ವಿದ್ಯಾರ್ಥಿಗಳಿಗೆ ಮಾರಿಕಾಂಭಾ ದೇವಸ್ಥಾನದಿಂದ ನೀಡಲಾಗುವ ಪ್ರತಿಭಾ ಪುರಸ್ಕಾರವನ್ನು ವಿತರಿಸಿ ಮಾತನಾಡಿದರು.

ಮಕ್ಕಳು ಗಳಿಸಿದ ಶಿಕ್ಷಣ ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ ಸಮಾಜದ ಹಿತಕ್ಕಾಗಿ ದೇಶದ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು. ಮಕ್ಕಳ ಶಿಕ್ಷಣದಲ್ಲಿ ಪಾಲಕರ ಪಾತ್ರವನ್ನು ಯಾರೂ ಅಲ್ಲಗಳಿಯಕೂಡದು. ಪಾಲಕರ ಬೇವರಿನ ಪರಿಶ್ರಮದ ಫಲವಾಗಿ ಮಕ್ಕಳು ತಮ್ಮ ಕಾಲಿನ ಮೇಲೆ ನಿಲ್ಲುತ್ತಾರೆ. ನಂತರ ಪಾಲಕರನ್ನೆ ಮರೆತು ಬಿಡುತ್ತಾರೆ. ಇಂತಹ ಮನಸ್ಥಿತಿಯಿಂದ ಮಕ್ಕಳು ಮೊದಲು ಹೊರಗೆ ಬರಬೇಕೆಂದರು. 

ನಮ್ಮಲ್ಲಿರುವ ತಂತ್ರಜ್ಞಾನ ಬೇರೆಬೇರೆ ದೇಶಗಳಿಂದ ಎರವಲು ತಂದಿದ್ದೆ ಹೆಚ್ಚು. ಇದಕ್ಕೆ ಕಾರಣ ನಮ್ಮಲ್ಲಿರುವ ಪ್ರತಿಭಾನ್ವಿತರು ಪಲಾಯನವಾದಿಗಳಾಗುತ್ತಿರುವುದು. ಅವರು ನಮ್ಮ ದೇಶಕ್ಕೆ ಕೊಡುಗೆ ನೀಡುವುದನ್ನು ಬಿಟ್ಟು ಹಣಕ್ಕಾಗಿ ವಿದೇಶದತ್ತ ಮುಖ ಮಾಡುತ್ತಿದ್ದಾರೆಂದು ಹೇಳಿದರು. ಇಂದಿನ ಶಿಕ್ಷಣ ವಾಣಿಜ್ಯಕರಣಗೊಳ್ಳುತ್ತಿರುವುದು ತುಂಬಾ ವಿಷಾದನೀಯ ಸಂಗತಿಯಾಗಿದೆ. ಇಂದಿನ ಶಿಕ್ಷಣ ನೈತಿಕತೆ ಮತ್ತು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಇದನ್ನು ಬದಲಾಯಿಸಿ ಹೊಸ ವ್ಯವಸ್ಥೆ ತರುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದ ಅವರು ಮಕ್ಕಳು ಪಡೆದ ಶಿಕ್ಷಣ ಸಮಾಜಕ್ಕೆ ಮತ್ತು ದೇಶಕ್ಕೆ ಉಪಯೋಗವಾಗುತ್ತಿರಬೇಕೆಂದರು.

ಮಾರಿಗುಡಿ ದೇವಾಲಯದ ಆಡಳಿತ ಮಂಡಳಿ ಅದ್ಯಕ್ಷ ರವಿ ನಾಯ್ಕ ಮಾತನಾಡಿ ಮಕ್ಕಳ ಪ್ರತಿಭೆಯನ್ನು ದೇಶಕ್ಕೆ ಸಮರ್ಪಣೆ ಮಾಡಬೇಕೆಂದು ಹೇಳಿದರು. ದೇವಾಲಯದ ಪ್ರಮುಖ ಬಾಬುದಾರರಾದ ಜಗದೀಶ ಗೌಡ್ರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪಾಲಕರು ಕಾಲೇಜನ್ನು ನೋಡಿ ಮಕ್ಕಳ ಶಿಕ್ಷಣವನ್ನು ನಿರ್ಧರಿಸುತ್ತಿದ್ದಾರೆ. ನಮ್ಮ ದೇಶದ ಎಷ್ಟೋ ನಾಯಕರು ಸಾಧಕರು ಸಣ್ಣ ಸಣ್ಣ ಕಾಲೇಜಿನಲ್ಲಿಯೇ ಕಲೆತು ಜಗತ್ತೇ ಹುಬ್ಬೇರಿಸುವಂತಹ ಸಾಧನೆ ಮಾಡಿರುವದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕೆಂದರು.

ವೇದಿಕೆಯಲ್ಲಿ ನ್ಯಾದೀಶರುಗಳಾದ ವಿ ಜಗದೀಶ, ಶ್ರೀಮತಿ ರವಿ ವಿ, ದೇವಾಲಯದ ಆಡಳಿತ ಮಂಡಳಿ ಉಪಾದ್ಯಕ್ಷ ಸುದೇಶ ಜೋಗಳೆಕರ್, ಧರ್ಮದರ್ಶಿಗಳಾದ ವತ್ಸಲಾ ಹೆಗಡೆ, ದೇವಾಲಯದ ಪ್ರಮುಖ ಬಾಬುದಾರರಾದ ಬಸವರಾಜ ಚಕ್ರಸಾಲಿ ಉಪಸ್ಥಿತರಿದ್ದರು. ದೇವಾಲಯದ ಧರ್ಮದರ್ಶಿ ಎಸ್ ಪಿ ಶೆಟ್ಟಿ ಸ್ವಾಗತ ಹಾಗು ದೇವಾಲಯದ ಸಿಬ್ಬಂದಿ ಪ್ರಶಾಂತ ನಿರ್ವಹಣೆ ಮಾಡಿದರು

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7