ಶಿರಸಿ: ಸಾರ್ವಜನಿಕ ಗಣೇಶೋತ್ಸವದ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಬಳಸಲು ಪೋಲಿಸ್ ಇಲಾಖೆಯಿಂದ ನಿರ್ದೇಶನ ನೀಡಿರುವುದರಿಂದ ದುಬಾರಿ ಮೊತ್ತದ ಸಿಸಿ ಕ್ಯಾಮಾರವನ್ನು ನಗರಸಭೆಯಿಂದಲೇ ಪೂರೈಸಿಕೊಡಬೇಕೆಂದು ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಆಗ್ರಹಿಸಿದ್ದಾರೆ.

ಸಾರ್ವಜನಿಕ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಸೋಮವಾರ ನಗರ ಠಾಣೆಯಲ್ಲಿ ಪಿಎಸ್ಆಯ್ ರಾಜಕುಮಾರ ಅದ್ಯಕ್ಷತೆಯಲ್ಲಿ ಗಣೇಶೋತ್ಸವ ಮಂಡಳಿಯೊಂದಿಗೆ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ರಾಜಕುಮಾರವರು ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ  ಕನಿಷ್ಠ ಎರಡಾದರೂ ಸಿಸಿ ಕ್ಯಾಮರ ಅಳವಡಿಸಬೇಕೆಂದು ಸೂಚನೆ ನೀಡಿದ್ದರು.ಇದರಿಂದ ಕಂಗಲಾದ ಸಣ್ಣಸಣ್ಣ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು,ಮೊದಲೇ ಗಣೇಶೋತ್ಸವಕ್ಕೆ ಮಂಡಳಿಯಲ್ಲಿ ಹಣ ಇಲ್ಲದಿರುವಾಗ ಇನ್ನೆಲ್ಲಿ ಸಿಸಿ ಕ್ಯಾಮಾರಕ್ಕೆ ಹಣ ತರುವದೆಂದು ಇಕ್ಕಟ್ಟಿನ ಸ್ಥಿತಿಯಲ್ಲಿದ್ದರು.

ನಂತರ ಮಂಡಳಿಯವರು ಸಭೆ ಮುಗಿಸಿದ ಬಳಿಕ ನೇರವಾಗಿ ಸಾಮಾಜಿಕ ಧುರೀಣ ರಾಜು ಶೆಟ್ಟಿಯವರ ನೇತೃತ್ವದಲ್ಲಿ ನಗರಸಭೆಗೆ ಬಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕರವರೊಂದಿಗೆ ಸಣ್ಣಸಣ್ಣ ಮಂಡಳಿಯವರಿಗೆ ನಗರಸಭೆಯಿಂದಲೇ ಸಿಸಿ ಕ್ಯಾಮಾರ ಅಳವಡಿಸಿ ಪುನಃ ಅದನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಿಕೊಬೇಕೆಂದು ಮನವಿ ಮಾಡಿದರು.ಈ ಸಂಧರ್ಭದಲ್ಲಿ ಅಧ್ಯಕ್ಷರು ಪೋಲಿಸ್ ಇಲಾಖೆಯವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರ ಅಳವಡಿಸಲು ಆದೇಶ ಬಂದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ.ಹಾಗೇನಾದರೂ ಬಂದಿದ್ದೆ ಆದರೆ ನಾನು ನಮ್ಮ ಸದಸ್ಯರ ಜೊತೆಗೆ ಚರ್ಚೆಮಾಡಿ ಒಂದು ನಿರ್ಧಾರಕ್ಕೆ ಬರುವುದಾಗಿ  ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೆರ್, ಪೌರಾಯುಕ್ತ ಕೇಶವ ಚೌಗುಲೆ ಮುಂತಾದವರು ಇದ್ದರು.

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7