ಜೋಯಿಡಾ:  ‌ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತಿ ವ್ಯಾಪ್ತಿಯ ದಬ್ಗಾರ ,ಯರಮುಖ, ಶೇವಾಳಿ,ಕೋಂಬಾ,ತಮ್ಮಣಗಿ,ಗುಂದ,ಕರಿಯಾದಿ,ಅವರ್ಲಿ ಸೇರಿದಂತೆ ಇನ್ನೂ ಹಲವು ಗ್ರಾಮಗಳಲ್ಲಿ ಅಡಿಕೆ ಬೆಳೆಗಾರರು ಅಡಕೆಗೆ ಕೊಳೆ ರೋಗ ಬಂದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ‌ ಬಾರಿ ಅತಿಯಾದ ಮಳೆಯಾದ ಕಾರಣ ಅಡಿಕೆ ಮತ್ತು ಕಾಳುಮೆಣಸು ರೋಗಗಳಿಗೆ ತುತ್ತಾಗಿದೆ. ಈ ಭಾಗದ ಜನರು ಅಡಿಕೆ ಬೆಳೆಯನ್ನೇ ನಂಬಿ ಜೀವನ‌ ನಡೆಸುವವರಾಗಿದ್ದು ಈ ಬಾರಿ ಬಂದ ಅತ್ಯಧಿಕ ಕೊಳೆ ರೋಗದಿಂದ ರೈತರು ತೊಂದರೆ ಎದುರಿಸುವಂತಾಗಿದೆ.

ಕೊಳೆ ನಿಯಂತ್ರಣಕ್ಕಾಗಿ ಬಹಳಷ್ಟು ಔಷಧ ಸಂಪೂರ್ಣ ಸಿಂಪಡಣೆ‌ ಮಾಡಿದರು ಸಹಿತ ಯಾವುದೇ ಪ್ರಯೋಜನವಾಗಿಲ್ಲ. ತುತ್ತು ಸುಣ್ಣ, ಸೇರಿದಂತೆ ಇನ್ನೂ ಹಲವು ಔಷಧಗಳನ್ನು ಮೂರು ಬಾರಿ‌ ಸಿಂಪಡನೆ‌ ಮಾಡಿದರು ಕೊಳೆ ನಿಯಂತ್ರಣಕ್ಕೆ ಬರುತ್ತಿಲ್ಲ‌ ಎನ್ನುತ್ತಾರೆ ರೈತರು.

ಅತಿಯಾದ ಕೊಳೆ ರೋಗದಿಂದ ಅಡಿಕೆ ಮರಗಳೇ ಸಾಯುತ್ತಿರುವುದು ರೈತರ ನಿದ್ದೆಗೆಡಿಸಿದೆ. ಇಂದುಮತಿ ದೇಸಾಯಿ ಎನ್ನುವವರ ತೋಟದಲ್ಲಿ ಕೊಳೆ ರೋಗದಿಂದ ನೂರಕ್ಕೂ ಹೆಚ್ಚಿನ‌ ಅಡಿಕೆ ಮರಗಳು ಕೊಳೆ ರೋಗದಿಂದ ಸತ್ತಿವೆ. ಹೀಗಾಗಿ ಲಕ್ಷಾಂತರ ರೂ ನಷ್ಟ ಅನುಭವಿಸಿದಂತಾಗಿದೆ.

ಕೆಲ ಕಡೆಗಳಲ್ಲಿ ಅತಿಯಾದ ಗಾಳಿ‌ಮಳೆಯಿಂದ ಅಡಿಕೆ ಮರಗಳು ಧರೆಗರುಳಿದರೆ ಇನ್ನೂ ಕೆಲವು ರೈತರ ತೋಟಗಳಲ್ಲಿ ಅರ್ಧದಷ್ಟು ಬೆಳೆ ಕೊಳೆಯಿಂದ ಹಾನಿಗಿಡಾಗಿದೆ. ಅಡಿಕೆ ಕೊಳೆ ರೋಗಕ್ಕೆ  ತೋಟಗಾರಿಕಾ ಅಧಿಕಾರಿಗಳು ಮತ್ತು ತಹಶೀಲ್ದಾರರು ಜಂಟಿ ಪರಿಶೀಲನೆ ‌ನಡೆಸಿ ರೈತರ ಕಷ್ಟಕ್ಕೆ ಸ್ಪಂದಿಸಿ ಸರ್ಕಾರದಿಂದ ಸಿಗುವ ಪರಿಹಾರ ದೊರಕಿಸಿಕೊಡಬೇಕಿದೆ.

  ಅಡಿಕೆ ಕೊಳೆ ರೋಗಕ್ಕೆ ಸರ್ಕಾರದಿಂದ ಬರುವಂತಹ ಪರಿಹಾರವನ್ನು ಸಿಗುವಂತೆ ಮಾಡುತ್ತೇನೆ. ಕೊಳೆ ಬಂದತಹ ರೈತರ ತೋಟಕ್ಕೆ ನಮ್ಮ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸುತ್ತೇವೆ.

ಶೈಲೇಶ ಪರಮಾನಂದ 

 ಪ್ರಭಾರಿ ತಹಶೀಲ್ದಾರ ಜೋಯಿಡಾ.

 ಅಡಿಕೆ ಕೊಳೆ ಬಂದ ರೈತರು ಈಗಾಗಲೇ ಅರ್ಜಿಗಳನ್ನು ಸಲ್ಲಿಸಿದ್ದಾರೆ. ನಮ್ಮ ಇಲಾಕೆಯಿಂದ ಪರಿಶೀಲನೆ ನಡೆಸಿ ಸರ್ಕಾರದಿಂದ ಬರುವ ಪರಿಹಾರ ರೈತರಿಗೆ ನೀಡುತ್ತೇವೆ.

ಸಂತೋಷ ಯಕ್ಕೇಳ್ಳಿಕರ್ 

 ತೋಟಗಾರಿಕಾ ಇಲಾಖೆ ಅಧಿಕಾರಿಗಳು ಜೋಯಿಡಾ.

 ನನ್ನ ಅಡಿಕೆ ತೋಟದ ಅರ್ಧದಷ್ಟು ಮರಗಳಿಗೆ ಕೊಳೆ ಬಂದು ಅಡಿಕೆ ಉದುರುತ್ತಿದೆ, ನೂರಾರು ಮರಗಳು ಕೊಳೆ ಬಂದು ಸತ್ತಿವೆ. ಸತತವಾಗಿ ಮೂರು ವರ್ಷಗಳಿಂದ ಕೊಳೆ ರೋಗ ಬರುತ್ತಿದೆ.ನಿರಂತರವಾಗಿ ಕೊಳೆ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡಿದರು ಕೊಳೆ ರೋಗ ನಿಲ್ಲುತ್ತಿಲ್ಲ,‌ಸರ್ಕಾರ‌ ರೈತರಿಗೆ ಪರಿಹಾರ ನೀಡಬೇಕಿದೆ.

ಇಂದುಮತಿ ದೇಸಾಯಿ   

ಸ್ಥಳೀಯ ರೈತೆ.

ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…

https://chat.whatsapp.com/FwQPbtH4lkpE71sGaWxRXj