ಶಿರಸಿ: ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಈರ್ವರು ಆರೋಪಿಗಳನ್ನು ಪೋಲಿಸರು ತಾಲೂಕಿನ ಗೋಳಿ ದೇವಸ್ಥಾನದ ಬಳಿ ಬಂಧಿಸಿ ವಾಹನದಲ್ಲಿದ್ದ ಎರಡು ಹೋರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆ ಸಂಧರ್ಭದಲ್ಲಿ ಇನ್ನೊರ್ವ ತಪ್ಪಿಸಿಕೊಂಡಿದ್ದಾನೆ. ಹಾರುಗಾರ ಗ್ರಾಮದ ಹರೀಶ ರಾಜು ಮಡಿವಾಳ ಹಾಗು ನೆಗ್ಗು ಗ್ರಾಮದ ಪರಮೇಶ್ವರ ಬೈರಾ ಮಡಿವಾಳ ಬಂಧಿತ ಆರೋಪಿಗಳಾಗಿದ್ದಾರೆ. ಹಾನಗಲ್ ತಾಲೂಕಿನ ಕಾಸಿಂ ರಾಜೇಶ ಬೆಪಾರಿ ತಪ್ಪಿಸಿಕೊಂಡ ಆರೋಪಿಯಾಗಿದ್ದಾನೆ. ಆರೋಪಿಗಳನ್ನು ಗೋ ಹತ್ಯೆ ಮತ್ತು ನಿಷೇಧ ಕಾಯಿದೆ ಅಡಿಯಲ್ಲಿ ಬಂಧಿಸಲಾಗಿದೆ. ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7