ಶಿರಸಿ: ಮೀನು ಮರಿಗಳನ್ನು ಕೆರೆಯಲ್ಲಿ ಬಿಡಲು ಮೀನುಗಾರಿಕೆಯಿಂದ ಹೊಸದಾಗಿ ಜಾರಿಗೆ ತಂದಿರುವ ಈ- ಪ್ರೊಕ್ಯೂರಮೆಂಟ್ ಟೆಂಡರನ್ನು ರದ್ದುಗೊಳಿಸಿ ಹಿಂದಿನಂತೆಯೇ ಬಹೀರಂಗ ಹರಾಜುವಿಗೆ ಅವಕಾಶ ಮಾಡಿಕೊಡಬೇಕೆಂದು ಸರಕಾರಕ್ಕೆ ಆಗ್ರಹಿಸಿ ಇಂದು ತಾಲೂಕಿನ 13 ಕ್ಕೂ ಹೆಚ್ಚಿನ ಕೆರೆಗಳ ಗ್ರಾಮದ ಮುಖ್ಯಸ್ಥರು ಎಸಿ ಕಚೇರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಪಿಎಂಸಿ ಸದಸ್ಯ ಸುನೀಲ್ ನಾಯ್ಕರವರು ಈ ಪ್ರೊಕ್ಯೂರಮೆಂಟ್ ಟೆಂಡರ್ ಮಾಡುವುದರಿಂದ ಕೆರೆಯ ಲಾಭ ಗ್ರಾಮಸ್ಥರ ಹೊರತಾಗಿ ಇನ್ನಾರೋ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಇದರಿಂದ ಗ್ರಾಮಸ್ಥರಿಗೆ ತಮ್ಮ ಕೆರೆಯ ರಕ್ಷಣೆ ಮಾಡಿಕೊಳ್ಳಲಾಗದೇ ಅಶಾಂತಿಗೆ ಕಾರಣವಾಗಬಹುದು. ಬಹಿರಂಗ ಹರಾಜಿನ ಲಾಭ ಗ್ರಾಮಸ್ಥರಿಗೆ ಆಗುವುದರಿಂದ ಕೆರೆಯ ರಕ್ಷಣೆ, ಕೆರೆಯಲ್ಲಿರುವ ಮೀನಿನ ರಕ್ಷಣೆಯ ಜೊತೆಗೆ ಬಂದ ಲಾಭದಲ್ಲಿ ಗ್ರಾಮದ ದೇವಸ್ಥಾನ ಸೇರಿದಂತೆ ಗ್ರಾಮದ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.ಕಚೇರಿ ವ್ಯವಸ್ಥಾಪಕಿ ಶೈಲಜಾ ಹೆಗಡೆ ಮನವಿ ಸ್ವೀಕರಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ವಿವಿಧ ಗ್ರಾಮದ ಪ್ರಮುಖರಾದ ನಟರಾಜ ಬಿ ಹೊಸೂರ್, ರಾಘವೇಂದ್ರ ಎಸ್ ಗಾಣಿಗ ,ಮಲ್ಲಿಕಾರ್ಜುನ ಪಾಟಿಲ್,ಶ್ರೀಧರ ನಾಯ್ಕ,ತುಕರಾಮ ನಾಯ್ಕ,ಸಂತೋಷ ನಾಯ್ಕ, ನರಸಿಂಹ ನಾಯ್ಕ ನರೂರ್,ರಾಜು ಡಿ ಹಿರೂರ್ ಮುಂತಾದವರು ಇದ್ದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
