ಶಿರಸಿ;ಕದಂಬ ಸೈನ್ಯದಿಂದ ನೀಡಲಾಗುವ ಈ ಬಾರಿಯ ಕದಂಬ ರತ್ನ ಪ್ರಶಸ್ತಿಯನ್ನು ಶಿರಸಿ ತಾಲೂಕಿನ ಬನವಾಸಿಯ ಪತ್ರಕರ್ತರು, ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯ ನಾಯಕರು ಹಾಗು ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರೂ ಆಗಿರುವ, ಉದಯಕುಮಾರ ಕಾನಳ್ಳಿಯವರಿಗೆ ನೀಡಿ ಗೌರವಿಸಲಾಗಿದೆ.

ಕಳೆದ ಜುಲೈ 26 ರಂದು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮಂಡ್ಯದಲ್ಲಿ ಏರ್ಪಡಿಸಲಾಗಿತ್ತು. ಅನಿವಾರ್ಯ ಕಾರಣಗಳಿಂದ ಅವರು ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಹಾಜರಾಗದಿರುವ ಕಾರಣಕ್ಕೆ ಕದಂಬ ಸೈನ್ಯದ ರಾಜ್ಯ ಅಧ್ಯಕ್ಷ ಬೇಕ್ರಿ ರಮೇಶರವರೇ ಶಿರಸಿಗೆ ಆಗಮಿಸಿ ಅವರ ಮನೆಗೆ ತೆರಳಿ ಕದಂಬ ರತ್ನ ಪ್ರಶಸ್ತಿ ಪ್ರಧಾನ ಮಾಡಿದರು.

ಈ ಸಂಧರ್ಭದಲ್ಲಿ ಸಂಘಟನೆಯ ರಾಜ್ಯ ಸಹಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ,ರಾಜ್ಯ ಸಮಿತಿ ಸದಸ್ಯ ಮಹಾದೇವ ಸ್ವಾಮಿ ಮೈಸೂರು, ಶಿರಸಿ ತಾಲೂಕಾ ಸಂಚಾಲಕ ಗುತ್ಯಪ್ಪ ಮಾದರ ಬನವಾಸಿ ಉಪಸ್ಥಿತರಿದ್ದರು.