ಶಿರಸಿ:  ನಗರದ ನಿಲೇಕಣಿ ಶಾಲೆಯ ಹತ್ತಿರ ವಾಹವೊಂದರಲ್ಲಿ ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೋಲಿಸರು ಬಂಧಿಸಿ ವಾಹನದಲ್ಲಿದ್ದ ನಾಲ್ಕು ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ರವಿಕಿರಣ ರಾಜು ಜಾಡರ್,ವೆಂಕಟೇಶ ಪಾಂಡುರಂಗ ಉಡದಂಗಿ,ಮಹ್ಮದ್ ರಫೀಕ್ ಯಾನೆ ಪಾರೂಕಸಾಬ್ ಹಾಗೂ ಗೌಸ್ ಜಾನುವಾರುಗಳನ್ನು ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಆರೋಪಿಗಳಾಗಿದ್ದಾರೆ.

ನಗರ ಠಾಣೆ ಪಿಎಸ್ಆಯ್ ರಾಜಕುಮಾರ ಉಕ್ಕಲಿ ನಡೆಸಿದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7