ಶಿರಸಿ: ಕೊಂಕಣಿ ಲೋಕೋತ್ಸವ (2022) ವನ್ನು ಅ,28 ರಂದು ಸಂಜೆ ನಾಲ್ಕು ಗಂಟಗೆ ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯ ವಸಂತ ಬಾಂದೇಕರ್ ತಿಳಿಸಿದರು
ಗುರುವಾರ ನೆಮ್ಮದಿ ಕೆಂದ್ರದಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಕೊಂಕಣಿ ಲೋಕೋತ್ಸವದಲ್ಲಿ ಕೊಂಕಣಿ ಭಾಷೆಯ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ ಎಂದರು.
ಕೊಂಕಣಿ ಲೋಕೋತ್ಸವದ ಮುಖ್ಯ ಆಕರ್ಷಣೆಯಾಗಿ ಸಿದ್ದಿ ಪುಗುಡಿ ಮತ್ತು ದಮಾಮಿ ನೃತ್ಯ, ಗೌಳಿ ಸಿಗ್ಯಾ ನೃತ್ಯ, ಕುಂಬ್ರಿ ಸಿಗ್ಮೋ ನೃತ್ಯ ಮತ್ತು ಗುಮಟಾ ವಾದನಾ, ಜಿ ಎಸ್ ಬಿ ಸಮಾಜದ ಕಲಾಪ್ರದರ್ಶನ, ದೈವಜ್ಞ ಬ್ರಾಹ್ಮಣ ಲೋಕ ಕಲಾ ಪ್ರದರ್ಶನ, ಅಂಬೇಡ್ಕರ್ ರೈಟ್ಸ್ ಸಮಾಜ ಕಲಾ ಭಾರತಿ ಭಾವಕ್ಯ ಮೇಳ, ಅಂಬೇಡ್ಕರ್ ರೈಟ್ಸ್ ಸಮಾಜ ಬೇಡರ ವೇಶ ನಡೆಯಲಿದೆ.ಅತಿಥಿಗಳಿಗೆ ಸ್ವಾಗತಿಸಲು ಮಿಮಿಕ್ರಿ ಮಂಜು ಅವರಿಂದ ವಿಶೇಷ ವೇಶಭೂಷಣ ನಡೆಯಲಿದೆ ಎಂದರು.ಕಾರ್ಯಕ್ರಮದಲ್ಲಿ ಮಹಾವಿಷ್ಣು ದೇವಸ್ಥಾನದ ಮುಕ್ತೇಸರರಾದ ವಿಷ್ಣುದಾಸ ಕಾಸರಕೋಡ ಹಾಗು ಕೊಂಕಣಿ ರಂಗ ಕಲಾಕಾರ ಸಾಂತಾ ಫರ್ನಾಂಡೀಸ್ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ತಿಳಿಸಿದರು.
ಉದ್ಘಾಟನೆ
ಕಾರ್ಯಕ್ರಮದ ಉದ್ಘಾಟನೆಯನ್ನು ನಗರಸಭೆ ಅದ್ಯಕ್ಷ ಗಣಪತಿ ನಾಯ್ಕ ನೇರವೆರಿಸಲಿದ್ದು ಅದ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅದ್ಯಕ್ಷ ಡಾ.ಜಗದೀಶ್ ಪೈ ವಹಿಸುವರು. ಮುಖ್ಯ ಅತಿಥಿಗಳಾಗಿ ನಗರಸಭೆ ಉಪಾದ್ಯಕ್ಷೆ ವೀಣಾ ಶೆಟ್ಟಿ, ಸಮಾಜ ಸೇವಕ ಉಪೇಂದ್ರ ಪೈ, ನಗರ ಸಭೆ ಮಾಜಿ ಸದಸ್ಯ ಹರೀಶ ಪಾಲೇಕರ್, ಹಾಗು ವಿಶೇಷ ಅಹ್ವಾನಿತರಾಗಿ ಪ್ರಸಿದ್ಧ ಕಲಾಕಾರ ಸೂರ್ಯಕಾಂತ ಗುಡಿಗಾರ,ದೈವಜ್ಞ ವಾಹಿನಿಯ ಜಿಲ್ಲಾದ್ಯಕ್ಷ ಸುಧಾಕರ್ ರಾಯ್ಕರ್ ಉಪಸ್ಥಿತರಿರುವರು.ಕೊಂಕಣಿ ಲೋಕೋತ್ಸವದಲ್ಲಿ ಕಿಣಿ ಲೋಕಮಿತ್ರ ಫೌಂಡೇಶನ್ ಅಧ್ಯಕ್ಷ ರಾಮು ಕಿಣಿ ಇವರಿಂದ ವಿಶೇಷ ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕೊಂಕಣಿ ಅಕಾಡೆಮಿ ಮಾಜಿ ಸದಸ್ಯ ವಾಸುದೇವ ಶಾನಭಾಗ ಹಾಗು ಮಿಮಿಕ್ರಿ ಮಂಜು ಶೆಟ್ಟಿ ಉಪಸ್ಥಿತರಿದ್ದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
