ಶಿರಸಿ: ಈ ಬಾರಿ ಗಣೇಶೋತ್ಸವದಲ್ಲಿ ಡಿಜೆ ಅವಕಾಶವಿಲ್ಲ ಮತ್ತು ಸಾರ್ವಜನಿಕ ಗಣೇಶನ ಮುಂದೆ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಲೇ ಬೇಕು.ಇದು ಸರಕಾರದ ಆದೇಶವಾಗಿರುವುದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕೆಂದು ಎಸಿ ದೇವರಾಜ ಆರ್ ತಿಳಿಸಿದ್ದಾರೆ.
ಅವರು ಗುರುವಾರ ಮಿನಿ ವಿಧಾನ ಸೌಧದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರೊಂದಿಗೆ ನಡೆಸಿದ ಶಾಂತಿ ಸೌಹಾರ್ಧತೆ ಸಭೆಯಲ್ಲಿ ಮಾತನಾಡಿದರು.
ಸಾರ್ವಜನಿಕರಿಗೆ ತೊಂದರೆಯಾಗುವ ಡಿಜೆ ಸೌಂಡನ್ನು ಬಳಸದಂತೆ ಸುಪ್ರೀಂ ಕೋರ್ಟ ಆದೇಶಮಾಡಿದೆ. ಇದನ್ನು ಮೀರಿದರೆ ಅಂತಹ ಮಂಡಳಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅದೇ ರೀತಿಯಾಗಿ ಸಾರ್ವಜನಿಕರ ರಕ್ಷಣೆ ದೃಷ್ಟಿಯಿಂದ ಗಣೇಶ ಮಂಟಪದಲ್ಲಿ ಕನಿಷ್ಠ ಒಂದಾದರೂ ಸಿಸಿ ಕ್ಯಾಮರ ಅಳವಡಿಸಲೇಬೇಕು. ಇಲ್ಲವಾದಲ್ಲಿ ಪರವಾನಗಿ ಪತ್ರ ನೀಡಲಾಗುವದಿಲ್ಲ. ಸಾರ್ವಜನಿಕ ಗಜಾನನೋತ್ಸವ ಮಂಡಳಿಗಳು ಗಣೇಶನನ್ನ ಪ್ರತಿಷ್ಠಾಪಿಸುವ ಮುನ್ನ ಪಿಡಬ್ಲುಡಿ, ಹೆಸ್ಕಾಂ, ಅಗ್ನಿಶಾಮಕ ದಳ, ಪೊಲೀಸ್ ಹಾಗು ನಗರಸಭೆಯಿಂದ ಪರವಾನಗಿ ಪಡೆಯಬೇಕು.ಪರವಾನಗಿಯನ್ನು ಸರಳವಾಗಿ ಹಾಗೂ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಗಣೇಶೋತ್ಸವದಲ್ಲಿ ಹೆಸ್ಕಾಂ,ನಗರ ಸಭೆ ಮತ್ತು ಪಿಡಬ್ಲುಡಿ ಯವರು ಬಹುಮುಖ್ಯ ಪಾತ್ರವಹಿಸುತ್ತಾರೆ. ರಸ್ತೆಗಳ ಹೊಂಡ ತುಂಬುವ ಕೆಲಸ ಕೂಡಲೇ ಆಗಬೇಕು. ಅದರಂತೆ ನಗರಸಭೆಯವರು ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಯಾಗಿ ಮಾಡಬೇಕು.ಮತ್ತು ವಿದ್ಯುತ್ ಹೋಗದಂತೆ ಹೆಸ್ಕಾಂ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
