ಅಂಕೋಲಾ : ಶಿವಮೊಗ್ಗದಲ್ಲಿ ನಡೆದ ಮೂರನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಅಂಕೋಲಾದ ಗುಜುರಿಯೋ ಡೊ ಕೆನರೋ ಖಾನ್ ಕರಾಟೆ ಕ್ಲಾಸಿನ ವಿದ್ಯಾರ್ಥಿಗಳು ಭಾಗವಹಿಸಿ ಚಿನ್ನ, ಬೆಳ್ಳಿ, ಹಾಗೂ ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡು ಸಾಧನೆ ಮೆರೆದಿದ್ದಾರೆ.
ಕಟಾ ವಿಭಾಗದಲ್ಲಿ ಜೈ ಹಿಂದ್ ಶಾಲೆಯ ವಿದ್ಯಾರ್ಥಿ ಸನತ್ ಎನ್. ಗಾಂವಕರ ಅವರು ಚಿನ್ನದ ಪದಕ ಮತ್ತು ಪೈಟಿಂಗ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಎಂಟನೇ ವಯಸ್ಸಿನ ವಿಭಾಗದಲ್ಲಿ ಪಿಎಂ ಶಾಲೆಯ ವಿದ್ಯಾರ್ಥಿನಿ ಚೈತ್ರಾ ಆರ್. ನಾಯ್ಕ ಅವರು ಚಿನ್ನದ ಪದಕ ಹಾಗೂ ಪೈಟಿಂಗ್‌ನಲ್ಲಿಯೂ ಸಹ ಕಂಚಿನ ಪದಕ ಗಿಟ್ಟಿಸಿಕೊಂಡಿದ್ದಾಳೆ.
ಜೈಹಿಂದ ಪ್ರೌಡ ಶಾಲೆಯ ವಿದ್ಯಾರ್ಥಿಗಳಾದ ಮನಹಾನ ಎ.ಶೇಖ ಕಟಾದಲ್ಲಿ ಚಿನ್ನದ ಪದಕ ಪಡೆದಿದ್ದಾನೆ. ಜೈಹಿಂದ ಪ್ರೌಡ ಶಾಲೆಯ ವಿದ್ಯಾರ್ಥಿನಿ ನಾಗನಿ ಎಸ್. ಹುಲಸ್ವಾರ ಕಟಾದಲ್ಲಿ ಕಂಚಿನ ಪದ ಪಡೆದಿದ್ದಾಳೆ. ಹಾಗೂ ಮಂಥನ ವಿ. ಹುಲಸ್ವಾರ ಪೈಟಿಂಗನಲ್ಲಿ ಬೆಳ್ಳಿ ಮತ್ತು ಕಟಾದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ನಿರ್ಮಲಾ ಹೃದಯ ಶಾಲೆಯ ವಿದ್ಯಾರ್ಥಿ ಸುಮಂತ ಎಚ್. ಚೌಹಾಣ್ ಈತನು ಕಟಾ ವಿಭಾಗದಲ್ಲಿ ಬೆಳ್ಳಿ ಪದಕವನ್ನು, ಪೂರ್ಣಪ್ರಜ್ಞಾ ಕಾಲೇಜಿನ ವಿದ್ಯಾರ್ಥಿ ನವೀನ್ ಎಮ್. ನಾಯ್ಕ (ಬ್ಲಾಕ್ ಬೆಲ್ಟ್) ಈತನು ಕಟಾ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಮತ್ತು ಬಿ.ಜಿ.ಎಸ್. ಕಾಲೇಜಿನ ವಿದ್ಯಾರ್ಥಿ ವಿನೀತ್ ವಿನೋದ ಶಾನಭಾಗ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ.
ಪಿಎಂ ಪ್ರೌಡ ಶಾಲೆಯ ವಿದ್ಯಾರ್ಥಿನಿ ಜಾಹ್ನವಿ ಮೊರೆ ಈಕೆ ಪೈಟಿಂಗನಲ್ಲಿ ಬೆಳ್ಳಿ, ಕಟಾದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾಳೆ. ಜೈಹಿಂದ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರಥಮ್ ಜಿ. ನಾಯ್ಕ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾನೆ.
ಹಿಮಾಲಯ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್ ಶೇಟ್ ಇತನು ಕಟಾ ವಿಭಾಗದಲ್ಲಿ ಬೆಳ್ಳಿ ಪದಕವನ್ನು, ಶ್ರೇಯಾ ಜಿ. ಶೇಟ್ ಇವಳು ಕಟಾ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ. ಜೈಹಿಂದ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವೈಭವಿ ವಿ. ದೇವಳಿ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ.
ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ತನ್ನದಾಗಿಸಿಕೊಂಡ ವಿದ್ಯಾರ್ಥಿಗಳಿಗೆ ಇಂಟರನ್ಯಾಷನಲ 3 ನೇ ಡಾನ್ ಬ್ಲಾಕ್ ಬೆಲ್ಟ್ ಶಾಂತಾರಾಮ ಹುಲಸ್ವಾರ ಅವರು ತರಭೇತಿ ನೀಡಿದ್ದರು.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/HyQE3CIKWEICSXQCoirwQE