ಜೋಯಿಡಾ: ತಾಲೂಕಿನ ಕುಗ್ರಾಮ ಗಾಂಗೋಡಾ ಗ್ರಾಮಕ್ಕೆ ಸಾಗಲು ನಿರ್ಮಿಸಿದ 5 ಕೋಟಿ ರಸ್ತೆ ಬಸ್ ಸಂಚಾರಕ್ಕೆ ನಿರುಪಯುಕ್ತವಾಗಿದೆ. ಅರ್ಧಕ್ಕೆ  ಹೋಗುವ ಬಸ್ ನಿಂದಾಗಿ ಶಾಲಾಮಕ್ಕಳಿಗೆ, ಸ್ಥಳಿಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಈ ಭಾಗದ ಮುಖಂಡ ಚಂದ್ರಕಾಂತ ದೇಸಾಯಿ ಮುಂದಾಳತ್ವದಲ್ಲಿ ಬಸ್ ತಡೆದು ಪ್ರತಿಭಟಿಸಿ ತಹಶಿಲದಾರ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಲಾಗಿದೆ.

 ಚಂದ್ರಕಾಂತ ದೇಸಾಯಿ ಮಾತನಾಡಿ ಪಿ.ಎಮ್. ಜಿ.ಎಸ್. ವಾಯ್ ಯೋಜನೆ ಅಡಿಯಲ್ಲಿ ಜೋಯಿಡಾ ಗಾಂಗೋಡಾ 10 ಕಿ. ಮಿ. ಡಾಂಬರೀಕರಣ ರಸ್ತೆಗೆ 5 ಕೋಟಿ ಮಂಜೂರಿಯಾಗಿತ್ತು. ಅರಣ್ಯ ಇಲಾಖೆ ತೊಂದರೆಯಿಂದ ಕೆಮಿಕಲ್ ರಸ್ತೆ ಮಾಡಿ ಕೈತೊಳೆದುಕೊಂಡಿದೆ. ಈ ಮಾರ್ಗದ ಎರಡು ಕಡೆ 20 ಹಳ್ಳಿಗಳ 45 ಹೆಚ್ಚು ವಿಧ್ಯಾರ್ಥಿಗಳು 2 ಸಾವಿರಕ್ಕೂ ಹೆಚ್ಚು ಸ್ಥಳೀಯರಿದ್ದಾರೆ. 3 ಕಿ.ಮಿ.ಡಾಂಬರ ರಸ್ತೆ ಇದೆ. 2 ಕಿ.ಮಿ ಕೆಸರಿನ ರಸ್ತೆಯಲ್ಲಿ ಲಾಸ್ಕೆವಾಡಾ ಗ್ರಾಮತನಕ ಬಸ್ ಹೋಗುತ್ತಿದೆ. 5 ಕಿ.ಮಿ.ಮಣ್ಣಿನ ರಾಡಿ ರಸ್ತೆ ಸಂಪರ್ಕಕ್ಕೆ ಅಯೋಗ್ಯವಾಗಿದೆ. ಬಸ್ ಇದ್ದರು ರಸ್ತೆ ಹಾಳಾದ ಕಾರಣ ಉಪಯೋಗವಾಗುತ್ತಿಲ್ಲ. ರಸ್ತೆ ಸರಿಪಡಿಸದಿದ್ದರೆ ತಹಶೀಲದಾರ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಗಾಂಗೋಡಾ ರಸ್ತೆ ರೀಕಾರ್ಪೆಟಿಂಗ ಮಾಡಲು 40 ಲಕ್ಷ ಪಿ.ಎಮ್.ಜಿ.ಎಸ್.ವಾಯ್ ಗೆ ಮಂಜೂರಿಯಾಗಿ  ರಾಮಪೂರ ಕಂಪನಿಗೆ ಗುತ್ತಿಗೆಯಾಗಿದೆ. ಈ ಹಣದಿಂದ ಯಾವುದೇ ಕಾಮಗಾರಿ ಕೈಗೊಂಡಿಲ್ಲ, ಸರಕಾರದ ಹಣ ಎಲ್ಲಿಹೋಯಿತು. ಈ ಬಗ್ಗೆ ತನಿಖೆಯಾಗಬೇಕೆಂದು ಸ್ಥಳಿಯರು ಅಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಪ್ರವೀಣ ದೇಸಾಯಿ ಉಪಾಧ್ಯಕ್ಷ ಗ್ರಾ.ಪಂ.ಗಾಂಗೋಡಾ, ಗಜಾನನ ಬಾಂಡೋಳಕರ, ಗೋವಿಂದ ಬಾಂಡೋಳಕರ, ರಾಜಾರಾಮ ದೇಸಾಯಿ, ದಿಲಿಪ ಗಾಂವಕರ, ಚಿಮ್ಮಾ ಬಾಂಡೋಳಕರ, ಶಾಲಾ ಮಕ್ಕಳ ಪಾಲಕರು, ಸಾರ್ವಜನಿಕರು ಇದ್ದರು.