ಶಿರಸಿ: ಮೌಲ್ಯಾಧಾರಿತ ರಾಜಕಾರಕ್ಕೆ ಮುನ್ನುಡಿ ಬರೆದ ದೇಶ ಕಂಡ ಚಾಣಕ್ಷ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರ 97 ನೇ ಜನ್ಮ ದಿನಾಚರಣೆಯನ್ನು ದಿ.ರಾಮಕೃಷ್ಣ ಹೆಗಡೆಯವರ ಅಭಿಮಾನ ಬಳಗದಿಂದ ಶ್ರದ್ದಾಭಕ್ತಿಯಿಂದ ಆಚರಣೆ ಮಾಡಲಾಯಿತು.

ಅಭಿಮಾನಿ ಬಳಗದ ಸದಸ್ಯರು ಬೆಳಿಗ್ಗೆ ಯಲ್ಲಾಪುರ ರಸ್ತೆಯಲ್ಲಿರುವ ರಾಮಕೃಷ್ಣ ಹೆಗಡೆ ಸರ್ಕಲ್ ಬಳಿಯಿರುವ ರಾಮಕೃಷ್ಣ ಹೆಗಡೆಯವರ ಪುತ್ಥಳಿಗೆ ಮಾಲಾರ್ಪಣೆಮಾಡಿ ಪೂಜೆ ಸಲ್ಲಿಸಿ ಸಿಹಿ ವಿತರಿಸಿದರು. 

ಈ ಸಂಧರ್ಭದಲ್ಲಿ ಮಾತನಾಡಿದ ದಿ.ರಾಮಕೃಷ್ಣ ಹೆಗಡೆ ಅಭಿಮಾನಿ ಬಳಗದ ಪ್ರಮುಖರಾದ ವೆಂಕಟೇಶ ಹೆಗಡೆ ಹೊಸಬಾಳೆಯವರು ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರರಾಗಿರುವ ರಾಮಕೃಷ್ಣ ಹೆಗಡೆಯವರು 50 ವರ್ಷಗಳ ಕಾಲ ರಾಜ್ಯ ಮತ್ತು ದೇಶ ರಾಜಕಾರಣದಲ್ಲಿ ಪ್ರಮಾಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರ ಪುತ್ಥಳಿಯನ್ನು ರಾಜ್ಯದಲ್ಲಿಯೇ  ಮೊದಲ ಬಾರಿ ಶಿರಸಿಯಲ್ಲಿ ಸ್ಥಾಪನೆಗೊಂಡಿರುವುದು ನಮಗೆ ಅಭಿಮಾನದ ಸಂಗತಿಯಾಗಿದೆ ಎಂದರು.

ಹೆಗಡೆಯವರು ಗ್ರಾಮ ಸ್ವರಾಜ್ಯಕ್ಕಾಗಿ  ವಿಕೇಂದ್ರಿಕರಣ ವ್ಯವಸ್ಥೆಯನ್ನು ಜಾರಿಗೆ ತಂದರು. ವ್ರದ್ದಾಪ್ಯ ವೇತನ, ವಿಧವಾ ವೇತನ ಹೀಗೆ ಬಡವರ ಅನುಕೂಲಕ್ಕಾಗಿ ಅನೇಕ ವೇತನವನ್ನು ಜಾರಿಗೆ ತಂದರು. ದೂರದೃಷ್ಟಿಯುಳ್ಳ ನಾಯಕರಾಗಿದ್ದ ಹೆಗಡೆಯವರ ವಿಚಾರಧಾರೆಗಳು ಇಂದಿಗೂ ದೇಶಕ್ಕೆ ಪ್ರಸ್ತುತವಾಗಿದೆ. ಆದರೆ ಯಾರೂ ಕೂಡಾ ಇದರ ಬಗ್ಗೆ ಮಾತನಾಡುತ್ತಿಲ್ಲ.ಹೆಗಡೆಯವರು ಸತ್ತ ಮೇಲೆ ಅವರನ್ನು ಸಂಪೂರ್ಣವಾಗಿ ಮರೆತು ಬಿಟ್ಟರು.ಅವರಿಂದ ಪಳಗಿದ ರಾಜಕಾರಣಿಗಳು ಇಂದಿಗೂ ಅಧಿಕಾರ ಅನುಭವಿಸುತ್ತಿದ್ದಾರೆ. ಇವತ್ತಿನ ರಾಜಕಾರಣಿಗಳ ಮೇಲೆ ಯಾರೂ ಅಧ್ಯಯನ ಮಾಡಲು ಆಗುವದಿಲ್ಲ. ಆದರೆ ಹೆಗಡೆಯವರನ್ನು ಇಂದಿನ ಪೀಳಿಗೆ ಅಧ್ಯಯನ ಮಾಡಿದರೆ ಮೌಲ್ಯಾಧಾರಿತ ರಾಜಕಾರಣ ಕಲಿಯಬಹುದು. 

ಅವರ ಮೇಲೆ ಮೂರು ಬಾರಿ ಅಪಾದನೆ ಬಂದ ಸಂಧರ್ಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಮೊದಲ ಮುಖ್ಯಮಂತ್ರಿ ಹೆಗಡೆಯವರು.ಅವರು ಕುಟುಂಬ ರಾಜಕಾರಣ ಮಾಡಬಹುದಿತ್ತು.ಆದರೆ ಅದಕ್ಕೆ ಆಸ್ಪದ ಕೊಡದೆ ಇನ್ನೊಬ್ಬರನ್ನು ಬೆಳೆಸಿದರು.ಅವರ ಬಗ್ಗೆ ಅಧ್ಯಯನ ಪೀಠ ರಚಿಸಲು ಮುಖ್ಯಮಂತ್ರಿ ಆದಿಯಾಗಿ ಎಲ್ಲರಿಗೂ ಮನವಿ ಮಾಡಿದ್ದೇವೆ. ಇದುವರೆಗೂ ಅದು ಸಾಧ್ಯವಾಗಿಲ್ಲ. ಮುಂದಾದರು ಹೆಗಡೆಯವ ಹೆಸರಿನಲ್ಲಿ ಅದ್ಯಯನ ಪೀಠವಾಗುವ ಭರವಸೆಯಿದೆ ಎಂದರು.ದಿ.ರಾಮಕೃಷ್ಣ ಹೆಗಡೆ  ಅಭಿಮಾನಿ ಬಳಗದ ಇನ್ನೊರ್ವ ಪ್ರಮುಖ ಪ್ರಮೋದ ಹೆಗಡೆ ಮಾತನಾಡಿ ರಾಜ್ಯ ಸರಕಾರ ಎಳು ವಿಶ್ವವಿದ್ಯಾಲಯವನ್ನು ಮಂಜೂರಿಮಾಡಿದ್ದು ಅದರಲ್ಲಿ ಒಂದು ವಿಶ್ವ ವಿದ್ಯಾಲಯ ಉತ್ತರಕನ್ನಡಕ್ಕೆ ಬರುವ ಸಾಧ್ಯತೆಯಿದೆ. ಈ ವಿಶ್ವವಿದ್ಯಾಲಯಕ್ಕೆ ಹೆಗಡೆಯವರ ಹೆಸರು ನಾಮಕರಣ ಮಾಡಬೇಕೆಂದು ಮನವಿ ಮಾಡಿದರು.

ಅವರು ಐದು ಪೊಲಿಟಿಕಲ್ ಫಿಲೊಸಫಿ ಬರೆದಿದ್ದಾರೆ.ಅವರು 35 ವರ್ಷಗಳ ಹಿಂದೆ ಬರೆದ “ಥೊಟ್ಸ್ ಎಂಡ್ ವಿಸನ್ ಆಫ್ ಹೆಗಡೆ” ಈ ಲೇಖನದಲ್ಲಿ ಬರೆದ ಎಲ್ಲ ಅಂಶಗಳು ಇಂದಿಗೂ ಪ್ರಸ್ತುತವಾಗಿದೆ.ತೋಳಬಲ ಮತ್ತು ಹಣ ಬಲದ ಕಪಿ ಮುಷ್ಠಿಯಿಂದ ಭಾರತದ ಪ್ರಜಾಪ್ರಭುತ್ವ ಪಾರಾಗಬೇಕು,ಜಾತಿಯತೆ ಹೀಗೆ ಅನೇಕ ವಿಚಾರಗಳನ್ನು ಬರೆದಿದ್ದಾರೆ.ಅವರ ಬರೆದಿರುವ ರಾಜಕೀಯ ವಿಚಾರಗಳು ನೂರು ವರ್ಷಗಳ ಕಾಲ ಶಾಶ್ವತವಾಗಿ ಇರುವಂತೆ ವಿಚಾರಮಾಡಿ ಬರೆದಿದ್ದಾರೆಂದು ಹೇಳಿದರು.

ಈ ಸಂಧರ್ಭದಲ್ಲಿ ದಿ.ರಾಮಕೃಷ್ಣ ಹೆಗಡೆ ಅಬಿಮಾನಿ ಬಳಗದ ಎನ್ ಪಿ ಗಾಂವ್ಕರ್, ರಮೇಶ ದುಬಾಶಿ, ಸತೀಶ ನಾಯ್ಕ,ಆರ್ ಎಂ ಹೆಗಡೆ ಹಲಸರ್ಗಿ,ಜಿ ಎನ್ ಹೆಗಡೆ ಮುರೆಗಾರ,ಎನ್ ಎಸ್ ಭಟ್ಟ ಮಣದೂರ್ ,ಜಿ ಎನ್ ಹೆಗಡೆ ಹೂತನ,ಆರ್ ಡಿ ಹೆಗಡೆ,ಸದಾನಂದ ಭಟ್ಟ,ರಂಗಪ್ಪ ದಾಸನಕೊಪ್ಪ ,ಮುಖೇಶ ಅಮಿನ್,ಶ್ರೀಪಾದ ರಾಯ್ಸದ್,ರಾಜು ಉಗ್ರಾಣಕರ್ ಇದ್ದರು.

Attachments area