ಶಿರಸಿ: ಉತ್ತರಕನ್ನಡ ಜಿಲ್ಲೆಯ ಈರ್ವರು ಶಿಕ್ಷಕರಿಗೆ ರಾಜ್ಯಮಟ್ಟದ  ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಪ್ರೌಢ ಶಾಲಾ ವಿಭಾಗದದಿಂದ ರಾಜ್ಯದಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿ ಉತ್ತಮವಾದ ಶಿಕ್ಷಣದ ಜೊತೆಗೆ  ಗುಣಮಟ್ಟವನ್ನು ಹೊಂದಿರುವ ಶಿರಸಿಯ ಸರಕಾರಿ ಮಾರಿಕಾಂಭಾ ಪ್ರೌಢಶಾಲೆಯ ಕನ್ನಡ ಶಿಕ್ಷಕರಾಗಿರುವ ನಾರಾಯಣ ಪರಮೇಶ್ವರ ಭಾಗ್ವತ್ ಇವರಿಗೆ, ಪ್ರಾಥಮಿಕ ಶಾಲಾ ವಿಭಾಗದಿಂದ ಯಲ್ಲಾಪುರದ ಕಂಚನಹಳ್ಳಿ ಹಿರಿಯ ಪ್ರಾರ್ಥಮಿಕ ಶಾಲೆಯ ಶಿಕ್ಷಕ ಸುಧಾಕರ ಗಣಪತಿ ನಾಯಕ್ ಇವರಿಗೆ ಲಭಿಸಿದೆ.

ಶಿಕ್ಷಕ ನಾರಾಯಣ ಭಾಗ್ವತ್ ರವರು ಮೂಲತಃ ಕುಮಟಾದವರಾಗಿದ್ದು ಹಾಲಿ ಶಿರಸಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ 30 ವರ್ಷಗಳ ಸುದೀರ್ಘವಾದ ಸೇವೆಯಲ್ಲಿ ಎಂಟು ವರ್ಷ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಳಿಕ ನೇರ ನೇಮಕಾತಿ ಹೊಂದಿ ಪ್ರೌಢಶಾಲಾ ಶಿಕ್ಷಕರಾಗುತ್ತಾರೆ. ಇವರು ಬೆಳಗಾವಿ ಜಿಲ್ಲೆಯ  ರಾಯಭಾಗ,ಖಾನಾಪುರ, ಮಳಗಿಯಲ್ಲೆ ಸೇವೆ ಸಲ್ಲಿಸಿದ ಬಳಿಕ ಮಾರಿಕಾಂಭಾ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರು ತಮಗೆ ಬಂದ ಪ್ರಶಸ್ತಿಯನ್ನು ಪ್ರೀತಿಯಿಂದ ತಮ್ಮನ್ನು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕ ವೃಂದಕ್ಕೆ ಸಲ್ಲಬೇಕೆಂದು ತಿಳಿಸಿದ್ದಾರೆ.