ಶಿರಸಿ: ತಾಲೂಕಿನ ಹನುಮಂತಿಯಲ್ಲಿ ಥರ್ಮಾಕೊಲ್ ನಿಂದ ನಿರ್ಮಿಸಿರುವ ಗಣಪತಿ ಮಂಟಪವೊಂದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಈ ಮಂಟಪವನ್ನು ನಿರ್ಮಿಸಿದವರು ಶ್ರವಣ ಸತ್ಯನಾರಾಯಣ ಆಚಾರ್ಯ. ವೃತ್ತಿಯಲ್ಲಿ ಬೆಳ್ಳಿ ಡಿಸೈನಿಂಗ್ ಕೆಲಸ ಮಾಡುತ್ತಿರುವ ಶ್ರವಣ ಎಳು ಅಡಿ ಹಾಗು ಎಂಟು ಉದ್ದನೆಯ ಮಂಟಪವನ್ನು ಥರ್ಮಾಕೊಲನಿಂದ ಅತ್ಯಂತ ಆಕರ್ಷಕವಾಗಿ ನಿರ್ಮಿಸಿದ್ದಾನೆ. ಈ ಮಂಟಪ ಮಾಡಲು ಶ್ರವಣ 40 ಥರ್ಮಾಕೊಲ್ ಬಳಸಿ 10 ದಿನದಲ್ಲಿ ಮಾಡಿ ಮುಗಿಸಿದ್ದಾನೆ‌.

ಹನುಮಂತಿ ಪಂಚಾಯತಿ ಅದ್ಯಕ್ಷರಾದ ಸಿದ್ದು ಗೌಡರ ಮನೆಯಲ್ಲಿ ಮಂಟಪವನ್ನು ನಿರ್ಮಾಣ ಮಾಡಲಾಗಿದೆ. ಸುಂದರವಾದ ಮಂಟಪ ಜನರ ಗಮನ ಸೆಳೆಯುತ್ತಿರುವುದರಿಂದಲೇ ಗೌಡರ ಮನೆಯಲ್ಲಿ ಭಕ್ತರು ಬಂದು ಮಂಟಪ ನೋಡಿ ಕಣ್ತುಂಬಿಸಿಕೊಳ್ಳುತ್ತಿರುವ ಸನ್ನಿವೇಶ ಸಾಮಾನ್ಯವಾಗಿ ಬಿಟ್ಟಿದೆ. 

ಮಂಟಪಕ್ಕೆ ಬಳಸಿರುವ ಥರ್ಮಾಕೊಲ್ ಮೇಲೆ ಡಿಸೈನಿಂಗ್ ಮಾಡಿ ಅದರ ಮೇಲೆ ಅಷ್ಟೇ ಸುಂದರವಾಗಿ ವಿವಿಧ ಬಣ್ಣವನ್ನು ಕೂಡಾ ಶ್ರವಣ ಬಳದಿದ್ದಾರೆ‌. ಥರ್ಮಾಕೊಲ್ ನಿಂದ ಮಾಡುವ ಕೆಲಸವನ್ನು ಅಲ್ಲಲ್ಲಿ ನೋಡಿ ಕಲಿತಿರುವ ಶ್ರವಣ,  ಸಿದ್ದು ಗೌಡರ ಮನೆಯಲ್ಲಿ ಸುಂದರವಾಗಿ ಮಂಟಪ ಮಾಡುವ ಮೂಲಕ ತನ್ನ ಮೊದಲ ಪ್ರಯತ್ನದಲ್ಲೆ ಯಶಸ್ಸು ಗಳಿಸಿದ್ದಾನೆಂದೇ ಹೇಳಬಹುದು.