ಶಿರಸಿ: ತಾಲೂಕಿನ ನೆಹರು ನಗರದ ಸರಕಾರಿ ಉರ್ದು ಮತ್ತು ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಆಳ್ವ ಫೌಂಡೇಶನ್ ಹಾಗೂ ನಂದನ ನಿಲೇಕಣಿ ಕುಟುಂಬದವರಿಂದ ನೀಡಲಾದ ಆಟೋಪಕರಣಗಳ ಉದ್ಘಾಟನೆಯನ್ನು ಕೆಪಿಸಿಸಿ ವಕ್ತಾರ ನಿವೇದಿತಾ ಆಳ್ವ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಾಲಕರು ಸರಕಾರಿ ಶಾಲೆಗಳತ್ತ ತಮ್ಮ ಮಕ್ಕಳನ್ನು ಸೇರಿಸುವ ಬಗ್ಗೆ ಚಿಂತನೆ ಮಾಡಬೇಕು.ಇಲ್ಲವಾದಲ್ಲಿ ಸರಕಾರಿ ಶಾಲೆಗಳು ಬೀಗ ಹಾಕುವ ಕಾಲ ಹತ್ತಿರವಿಲ್ಲವೆಂದರು. ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಯ ಫಲಿತಾಂಶಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿರುವುದನ್ನು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರಯವ ಮಕ್ಕಳು ಸಾಧಿಸಿ ತೋರಿಸಿದ್ದಾರೆ. ಅದರಂತೆ ಯಾವುದೇ ಸರಕಾರ ಕೂಡಾ ಸರಕಾರಿ ಶಾಲೆಗಳಿಗೆ ಆದ್ಯತೆ ಮೆರೆಗೆ ಬೇಕಾದ ಸಹಾಯಧನ ವಿವಿಧ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಪಡೆಯುವಂತೆ ಮಾಡಬೇಕೆಂದರು.
ಆಳ್ವ ಪೌಂಡೇಶನ್ ಹಾಗು ನಂದನ ನಿಲೇಕಣಿ ಕುಟುಂಬದಿಂದ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಕೆಲವೊಂದು ಶಾಲೆಗಳಿಗೆ ಕಳೆದ ವರ್ಷದಿಂದ ಕೈಯಲ್ಲಾದ ಕೊಡುಗೆ ನೀಡುತ್ತಿದೆ .ಈ ಉರ್ದು ಮತ್ತು ಆಂಗ್ಲ ಮಾದ್ಯಮ ಶಾಲೆಗೆ ಅವರ ಬೇಡಿಕೆಯಂತೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಹಾಯ ಮಾಡುವದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ಶಾಲಾ ಮುಖ್ಯೋಪದ್ಯಾಯಕ ಅಬ್ದುಲ್ ಫಝಲ್ ಶೇಖ್ ಅಹ್ಮದ್ ಖಾಜಿ,ಯುನಿಯನ್ ಪ್ರೌಢಶಾಲೆಯ ಆಡಳಿತ ಮಂಡಳಿ ಅದ್ಯಕ್ಷ ಭಾಷಾ ಸಾಬ್,ಸದಸ್ಯ ಝಬಿವುಲ್ಲಾ, ಅರುಣೋದಯ ಸಂಸ್ಥೆಯ ಅದ್ಯಕ್ಷ ಸತೀಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
