ಶಿರಸಿ: ಆಂದ್ರ ಪ್ರದೇಶದ ಗುಂಟೂರಿನಲ್ಲಿ ನಡೆದ ದಕ್ಷಿಣ ಭಾರತದ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪನಲ್ಲಿ ಶಿರಸಿಯ ಹೆಮ್ಮೆಯ ಕುವರ ಯಶಸ್ ಕುರಬರ್ 16 ವರ್ಷದೊಳಗಿನ ಹ್ಯಾಮರ್ ಎಸೆತದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ 61.96 ಮೀಟರ್ ದೂರ ಎಸೆಯುವ ಮೂಲಕ ದಕ್ಷಿಣ ಭಾರತ ಕೂಟ ದಾಖಲೆಯೊಂದಿಗೆ ಬಂಗಾರದ ಪದಕ ಪಡೆದಿದ್ದಾನೆ.
ಎಂ ಇ ಎಸ್ ಚೈತನ್ಯ ಮಹಾವಿದ್ಯಾಲಯ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ಯಶಸ್ ಶಿಕ್ಷಕ ಪ್ರವೀಣ ಕುರಬರ್ ಪುತ್ರರಾಗಿದ್ದಾರೆ.
