ಶಿರಸಿ: ರಾಜ್ಯ ಪ್ರಸಿದ್ಧ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸೆ,26 ರಿಂದ ಅ,5 ರವರಗೆ 9 ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕ್ರೀಡಾ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ರವಿ ನಾಯ್ಕ ತಿಳಿಸಿದ್ದಾರೆ.
ಅವರು ದೇವಾಲಯದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಮಾಹಿತಿ ನೀಡಿದರು. ಸೆ,5 ರಿಂದ 9 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರಗೆ ಶ್ರೀ ಮಾರಿಕಾಂಬಾ ಭಜನಾ ಮಂಡಳ ಹಾಗೂ ಇನ್ನಿತರ ಭಜನಾ ಮಂಡಳದಿಂದ ಭಜನೆ ಹಾಗೂ ಸಂಜೆ 7 ಗಂಟೆಯಿಂದ ಕೀರ್ತನೆ ನಡೆಯಲಿದೆ ಎಂದರು. ಸೆ,26ರಂದು ಆರತಿ ತಾಟಿನ ಹಾಗೂ ಭಕ್ತಿ ಗೀತೆಗಳ ಸ್ಪರ್ಧೆ ನಡೆಯಲಿದೆ. ಸೆ,27ರಂದು ಹಳ್ಳಿ ಹಾಡು ಹಾಗೂ ಭಾವ ಗೀತೆಗಳ ಸ್ಪರ್ಧೆ ನಡೆಯಲಿದೆ. ಸೆ,28 ರಂದು ಧ್ಯಾನ ಮಾಲಿಕೆ ಹಾಗೂ ಜಾನಪದ ಗುಂಪು ನೃತ್ಯ ಸ್ಪರ್ಧೆ ನಡೆಯಲಿದೆ. ಸೆ,29 ರಂದು ಚುಕ್ಕಿ ವಿಭಾಗದಲ್ಲಿ ರಂಗದಲ್ಲಿ ಸ್ಪರ್ಧೆ ಹಾಗೂ ಶಾಸ್ತ್ರೀಯ ನೃತ್ಯ (ಭರತ ನಾಟ್ಯ ) ಸ್ಪರ್ಧೆ ನಡೆಯಲಿದೆ. ಸೆ,30ರಂದು ಕರಕುಶಲ ವಸ್ತುಗಳ ಪ್ರದರ್ಶನ ಸಮೋಹ ದೇಶಭಕ್ತಿಗಳ ಸ್ಪರ್ಧೆ ಹಾಗೂ ಅಂಗನವಾಡಿ ನೃತ್ಯ ಸ್ಪರ್ಧೆ “ಅ” ವಿಭಾಗದಲ್ಲಿ ನಡೆಯಲಿದೆ.
ಅ,1 ರಂದು ಜಾನಪದ ಹಾಡುಗಳ ಸ್ಪರ್ಧೆ, ಸಾಮಾನ್ಯ ಜ್ಞಾನ ಪರೀಕ್ಷೆ ಹಾಗೂ ಅಂಗನವಾಡಿ ನೃತ್ಯ “ಬ” ವಿಭಾಗದಲ್ಲಿ ನಡೆಯಲಿದೆ. ಅ,2ರಂದು ಚದುರಂಗ ಸ್ಪರ್ಧೆ, ಭಗವದ್ಗೀತೆ ಶ್ಲೋಕ ಕಂಠಪಾಠ ಸ್ಪರ್ಧೆ ನಡೆಯಲಿದೆ. ಅ,3 ರಂದು ಚಿತ್ರಕಲೆ ಹಾಗು ಚಿಕ್ಕಮಕ್ಕಳ ಪ್ಯಾನ್ಸಿ ಡ್ರೆಸ್ ಸ್ಪರ್ಧೆ ನಡೆಯಲಿದೆ. ಅ,4 ರಂದು ಚಿತ್ರಕಲೆ ಹಾಗೂ ಚಿಕ್ಕಮಕ್ಕಳ ಪ್ಯಾನ್ಸಿ ಡ್ರೆಸ್ ಸ್ಪರ್ದೆ ನಡೆಯಲಿದೆ. ಪಂದ್ಯಾಟಗಳು ಸೆ,22 ರಿಂದ 23 ರವರಗೆ ಎರಡು ದಿನಗಳ ಕಾಲ ಖೋಖೊ, ಕಬ್ಬಡ್ಡಿ, ವಾಲಿಬಾಲ್, ಬ್ಯಾಡ್ಮಿಂಟನ್ ಸ್ಪರ್ಧೆ ಹಾಗೂ ಪುರುಷರಿಗೆ ಮತ್ತು ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ. 60 ವರ್ಷ ಮೇಲ್ಪಟ್ಟವರಿಗೆ ಓಟ, ಜಿಗಿತ, ಗುಂಡು ಎಸೆತ ಹಾಗು ನಡಿಗೆ ಸ್ಪರ್ಧೆ ನಡೆಯಲಿದೆ
Attachments area
