ಅಂಕೋಲಾ : ಕಳೆದ 21 ವರ್ಷದ ಹಿಂದೆ ಕಳ್ಳತನ ಎಸಗಿ ನಾಪತ್ತೆಯಾಗಿದ್ದ ಆರೋಪಿಯನ್ನು ಅಂಕೋಲಾ ಪೊಲೀಸರು ಗೋವಾದ ಮೆರ್ಸಿಯಲ್ಲಿ ಬಂಧಿಸಿ ಕರೆತಂದ ಘಟನೆ ಶನಿವಾರ ನಡೆದಿದೆ.
ಮೂಲತ ಹಳಿಯಾಳ ತಾಲೂಕಿನ ಹಾಲಿ ಗೋವಾ ನಿವಾಸಿ ಚಂದ್ರಶೇಖರ ಯಾನೆ ರಾಜು ಬಣಜಿಗಾರ ಬಂಧಿತ ಆರೋಪಿಯಾಗಿದ್ದಾನೆ.

ಘಟನೆ ವಿವರ:
2009 ರಲ್ಲಿ ಕಳ್ಳತನ ಪ್ರಕರಣದಲ್ಲಿ ಬಂಧಿತನಾದ ವ್ಯಕ್ತಿ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಅಂಕೋಲಾ ಠಾಣೆಯ ಸಿಪಿಐ ಸಂತೋಷ ಶೆಟ್ಟಿ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ವಿಶೇಷ ದಳದ ಸಿಬ್ಬಂದಿ ಶ್ರೀಕಾಂತ ಕಟಬರ, ಸುರೇಶ ಬಳ್ಳೋಳ್ಳಿ, ಮಾರುತಿ ಹಣಜಿಗರ ಇದ್ದರು.
