ಶಿರಸಿ:- ದೆಹಲಿಯ ಐಐಟಿ ಯಲ್ಲಿ ನಡೆಯುತ್ತಿರುವ ನ್ಯಾಷನಲ್ ಎಕ್ಸಿಬಿಷನ್ ಸ್ಪರ್ಧೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಶಿರಸಿಯ ತಾರಗೋಡಿ (ಅಂಬಳಿಕೆ ಮನೆ) ಕೃಷ್ಣ ಶ್ರೀಧರ ಹೆಗಡೆ ಆಯ್ಕೆಯಾಗಿದ್ದಾನೆ.

ವಿದ್ಯಾರ್ಥಿ ಕೃಷ್ಣ ಹೆಗಡೆ ಬೈರುಂಭೆಯ ಶಾರಾದಾಂಭಾ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದು ಇದೀಗ ಧಾರವಾಡದ ಅರ್ಜುನ್ ಪಿ ಯು ಕಾಲೇಜಿನಲ್ಲಿ ಕಲಿಯುತ್ತಿದ್ದಾನೆ. ಈತನು ಮಳೆ ಗಾಳಿ ಸಂಧರ್ಭದಲ್ಲಿ ವಿದ್ಯುತ್ ಫಾಲ್ಟ್ ಬಂದಾಗ ಎಲ್ಲಿ ಫಾಲ್ಟಾಗಿದೆ ಎಂದು ಕುಳಿತಲ್ಲಿಯೇ ಸುಲಭವಾಗಿ ಹೇಗೆ ಕಂಡು ಹಿಡಿಯುವುದನ್ನು ಪ್ರಯೋಗದ ಮೂಲಕ ಸಂಶೋಧನೆ ಮಾಡಿದ್ದಾನೆ.

 ಅದನ್ನು ದೆಹಲಿಯ ಐಐಟಿಯಲ್ಲಿ ಪ್ರದರ್ಶನ ಮಾಡಲು ಕರ್ನಾಟಕದಿಂದ ಆಯ್ಕೆಯಾಗಿದ್ದಾನೆ. ಈತನಿಗೆ ಭೈರುಂಭೆ ಶಾರಾದಾಂಭಾ ಪ್ರೌಢಶಾಲೆಯ ಶಿಕ್ಷಕರಾದ ವಸಂತ ಹೆಗಡೆ ಮಾರ್ಗದರ್ಶಕರಾಗಿದ್ದಾರೆ.

Attachments area