ಅಂಕೋಲಾ ಪಿಎಸೈ ಪ್ರವೀಣಕುಮಾರ ಹೆಸರಿನಲ್ಲಿ ನಕಲಿ ಇನ್ಸ್‌ಸ್ಟಾಗ್ರಾಂ ಖಾತೆ 

ಅಂಕೋಲಾ : ಇಲ್ಲಿನ ಪೊಲೀಸ್ ಠಾಣೆಯ ಪಿಎಸೈ ಪ್ರವೀಣಕುಮಾರ ಹೆಸರಿನಲ್ಲಿ ವಂಚಕರು ನಕಲಿ ಇನ್ಸ್‌ಸ್ಟಾಗ್ರಾಂ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ.

ಪ್ರವೀಣಕುಮಾರ.ಪಿಎಸೈ ಎಂಬ  ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿಸಿ, ಅವರ ಸ್ನೇಹಿತರಿಗೆ, ಪರಿಚಯಸ್ಥರಿಗೆ ಮೆಸೇಜ್ ಕಳುಹಿಸಿ, ತಮಗೆ ತುರ್ತಾಗಿ ಹಣಬೇಕೆಂದು ಅನೇಕರಿಗೆ ಹಣ ಕೇಳಿದ್ದು, ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ  ವಿನಂತಿಸುತ್ತಿದ್ದಾರೆ. ವಂಚಕರಿಂದ ಸಂದೇಶ ಸ್ವೀಕರಿಸಿದ ಸ್ನೇಹಿತರು ಪಿಎಸೈ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 

ನನ್ನ ಹೆಸರು ಮತ್ತು ಫೋಟೋ ಬಳಸಿ ಯಾರೋ ಇನ್‌ಸ್ಟಾಗ್ರಾಂ ನಕಲಿ ಖಾತೆ ತೆರೆದು ಸಾರ್ವಜನಿಕರಲ್ಲಿ ಹಣ ಕೇಳುತ್ತಿರುವುದು ಕಂಡುಬಂದಿದೆ. ಯಾರು ಕೂಡ ಹಣ ಕಳುಹಿಸಬೇಡಿ ಎಂದು ಪಿಎಸೈ ಪ್ರವೀಣಕುಮಾರ ಮನವಿ ಮಾಡಿದ್ದಾರೆ.