ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲಾಯಿತು.

ಈ ವಿಶೇಷ ದಿನದ ಸಂಧರ್ಭದಲ್ಲಿ ನಮ್ಮ ಶಾಲೆ ನಮ್ಮ ಹೆಮ್ಮೆ ಗ್ರೂಪ್ ವತಿಯಿಂದ ಶಾಲಾ ಮಕ್ಕಳಿಗೆ ಹಾಗೂ ಪಾಲಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.


ಈ ಸಂಧರ್ಭದಲ್ಲಿ ಶಾಲಾ ಮುಖ್ಯಾಪಾಧ್ಯಾಪಕರು ನಿರ್ಮಲಾ ಬಿ ಆಗೇರ,ಸಹಶಿಕ್ಷಕರು ನಾಗರತ್ನ ಎಸ್ ನಾಯಕ .ಪುಷ್ಪಾ ಜಿ ನಾಯಕ. ಭಾರತಿ ಬಿ ನಾಯಕ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರು ಗುರು ಡಿ ನಾಯ್ಕ ಹಾಗೂ ಸದಸ್ಯರು, ಶಾಲಾ ಅಭಿವೃದ್ದಿಯ ದೃಷ್ಟಿಯಿಂದ ನಮ್ಮ ಶಾಲೆನಮ್ಮಹೆಮ್ಮೆ ಎಂಬ ಗ್ರೂಪ್‌ನ ಹಳೆವಿದ್ಯಾರ್ಥಿ ಸದಸ್ಯರು ಹಾಗೂ ಪಾಲಕರು ಉಪಸ್ಥಿತರಿದ್ದರು.
