ವರದಿ : ದಿನಕರ ನಾಯ್ಕ. ಅಲಗೇರಿ.

ಅಂಕೋಲಾ : ಇಲ್ಲಿನ ಪೊಲೀಸ್ ಠಾಣೆಯಲ್ಲಿ ಏಳು ವರ್ಷಗಳ ಕಾಲ ದಕ್ಷತೆಯಿಂದ ಕಾರ್ಯನಿರ್ವಹಿಸಿದ, ಅಪರಾಧ ದಳದ ಸಿಬ್ಬಂದಿ ಮಂಜುನಾಥ ಲಕ್ಮಾಪುರ ಅವರು ಮುರ್ಡೇಶ್ವರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಅಪರಾಧ ದಳದಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ ಮಂಜುನಾಥ ಲಕ್ಮಾಪುರ ಅವರು ತನ್ನದೇ ಚಾಕಚಕ್ಯತೆಯ ಮೂಲಕ ಅನೇಕ ಪ್ರಕರಣಗಳನ್ನು ಭೇಧಿಸುವಲ್ಲಿ ಕಾರಣೀಕರ್ತರಾಗಿದ್ದರು. ತಮ್ಮ ಉತ್ತಮ ಸೇವೆಯ ಮೂಲಕ ಗುರುತಿಸಿಕೊಂಡ ಮಂಜುನಾಥ ಲಕ್ಮಾಪುರ ಅವರು ಮೇಲಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾದವರಾಗಿದ್ದಾರೆ.

ಕೇವಲ ಕರ್ತವ್ಯನಿಷ್ಠೆ ಮಾತ್ರವಲ್ಲದೆ ಉತ್ತಮ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡ ಇವರು ಅಂಕೋಲಾದ ಮಾರ್ನಿಂಗ್ ಬಾಯ್ಸ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾಗಿದ್ದರು. ಅನೇಕ ಪಂದ್ಯಾವಳಿಯನ್ನು ಸಂಘಟಿಸಿ ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ ಗೌರವ ಇವರಿಗೆ ಸಲ್ಲುತ್ತದೆ.

ಜನಸ್ನೇಹಿಯಾಗಿ, ಸಾಮಾಜಿಕ ಚಟುವಟಿಕೆಯೊಂದಿಗೆ ಕ್ರೀಯಾಶೀಲವಾಗಿ ತೊಡಗಿಸಿಕೊಂಡಿದ್ದ ಮಂಜುನಾಥ ಲಕ್ಮಾಪುರ ಅವರು ಅಂಕೋಲೆಯ ನೆಲದಲ್ಲಿ ತಮ್ಮ ಸ್ನೇಹಪರತೆಯ ಹೆಗ್ಗುರತನ್ನು ಇಟ್ಟು, ಅಪಾರ ಸ್ನೇಹಿತರ ಬಳಗವನ್ನು ಹೊಂದಿದ್ದಾರೆ. ಕ್ರೀಯಾಶೀಲ ಸಂಘಟಕರು ಆಗಿರುವ ಮಂಜುನಾಥ ಲಕ್ಷಾö್ಮಪುರ ಅವರ ಮುಂದಿನ ವೃತ್ತಿಜೀವನ ಉತ್ತಮವಾಗಿರಲಿ. ಇನ್ನೂ ಹೆಚ್ಚಿನ ಸಾಧನೆ ಮಾಡಿ, ನಿಮ್ಮ ಕೀರ್ತಿಪತಾಕೆ ಅತೀ ಎತ್ತರಕ್ಕೆ ಹರಾಡಲಿ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಅಲ್ಲಿಯೂ ಸೃಷ್ಟಿಯಾಗಲಿ ಎಂದು ಅಂಕೋಲಾದ ಕ್ರೀಕೆಟ್ ಪ್ರೇಮಿಗಳು, ಮೈಕಾ ಸಂಘಟನೆ ಹಾಗೂ ರಿಕ್ಷಾ ಹಾಗೂ ಟೆಂಪೊ ಯೂನಿಯನ್ ಮತ್ತು ಮೊರ್ನಿಂಗ್ ಬಾಯ್ಸ್ ಕ್ರೀಕೆರ‍್ಸ್, ಅಂಕೋಲಾದ ನಾಗರಿಕರು ಶುಭ ಹಾರೈಸಿದ್ದಾರೆ.