ರಾಘು ಕಾಕರಮಠ.

ಅಂಕೋಲಾ : ನಿರ್ದಿಷ್ಠ ವಯಸ್ಸು ಮೀರಿದ ಅವಿವಾಹಿತ ಪುರುಷರಿಗೆ ವಧು ತೋರಿಸುವ ನಾಟಕವಾಡಿ 8-10 ಲಕ್ಷ ರೂ ಹಣ ಪೀಕಿಸಿಕೊಂಡು, ಮದುವೆಯಾಗಿ ಕೆಲ ದಿನಗಳ ಬಳಿಕ ಹಣ ಮತ್ತು ಆಭರಣ ದೋಚಿ ಪರಾರಿಯಾಗುತ್ತಿದ್ದ ತಂಡವೊAದು ಜಿಲ್ಲೆಯಲ್ಲಿ ಸಕ್ರೀಯವಾಗಿದ್ದು, ಅಂಕೋಲಾದಲ್ಲಿಯು ಇಂತಹ ಜಾಲದ ಕೂಪಕ್ಕೆ ಬಿದ್ದು ಬದುಕನ್ನು ಬರಡಾಗಿಸಿಕೊಂಡ ವಿಲಕ್ಷಣ ವಿದ್ಯಮಾನ ಬೆಳಕಿಗೆ ಬಂದಿದೆ.

ನೀವು ಇನ್ನೂ ಮದುವೆಯಾಗಿಲ್ವಾ..? ಹಾಗಾದ್ರೆ ತುಂಬಾ ಎಚ್ಚರಿಕೆಯಿಂದಿರಿ. ಹೆಣ್ಣು ತೋರಿಸುತ್ತೇವೆಂದು ನಿಮಗೆ ಪಂಗನಾಮ ಹಾಕುವ ಗ್ಯಾಂಗ್ ಗಳು ಇದೀಗ ಸಕ್ರಿಯವಾಗಿವೆ ಹುಷಾರ್!.

ಹೌದು, ಅವಿವಾಹಿತರನ್ನೇ ಟಾರ್ಗೆಟ್ ಮಾಡಿ ನಕಲಿ ವಿವಾಹ ಮಾಡಿ, ಮೋಸ ಮಾಡುವ ಗ್ಯಾಂಗ್‌ಗಳು ಹುಟ್ಟಿಕೊಂಡಿವೆ. ವಯಸ್ಸಾದ್ರೂ ಇನ್ನೂ ಮದುವೆಯಾಗಿಲ್ಲವೆಂದು ಕೊರಗುತ್ತಿರುವವರು ಇವರ ಮಾತನ್ನು ಸುಲಭವಾಗಿ ನಂಬಿ ಮೋಸ ಹೋಗುವಂತಾಗಿದ್ದು ಆತಂಕವನ್ನು ಉಂಟು ಮಾಡಿದೆ.        

ಒಂದು ನಿರ್ದಿಷ್ಟ ವಯಸ್ಸಿನ ಪುರುಷರೇ ಈ ಗ್ಯಾಂಗ್‌ನ ಪ್ರಮುಖ ಗುರಿ. ಅವರು ಮೊದಲು ನಿಮಗೆ ವಧುವನ್ನು ತೋರಿಸುತ್ತೇವೆ ಎಂದು ಹೇಳುತ್ತಾರೆ. ವಧು ತೋರಿಸಲು ಶುಲ್ಕ ನೀಡಬೇಕೆಂದು ನಿಮ್ಮ ಬಳಿ ಹಣ ಪಡೆದುಕೊಳ್ಳುತ್ತಾರೆ. ಬಳಿಕ ಮದುವೆಯನ್ನೂ ಮಾಡಿಸುತ್ತಾರೆ. ಆದರೆ ಅದು ಅಸಲಿ ಮದುವೆಯ ಬದಲು ನಕಲಿ ಮದುವೆಯಾಗಿರುತ್ತದೆ. ಹೀಗೆ ನಕಲಿ ಮದುವೆ ಮಾಡಿಸಿ ಅವಿವಾಹಿತರಿಗೆ ಮೋಸ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ ಹಿಂದೆ ಅಂಕೋಲಾ ಪೊಲೀಸರು ಹಿಂದೆ ಬಿದ್ದಿದ್ದು, ಈ ಬೃಹತ ಜಾಲದ ಪತ್ತೆಗೆ ಮಹಾರಾಷ್ಟ್ರ ರಾಜ್ಯಕ್ಕೆ ತೆರಳಿದ್ದಾರೆ.

ಅಂಕೋಲಾದಲ್ಲಿ ನಡೆದದ್ದು ಇದು 3 ನೇ ಪ್ರಕರಣವಾಗಿದೆ. ಎರಡು ಪ್ರಕರಣದಲ್ಲಿ ಮೋಸ ಹೋದ ವರನ ಕುಟುಂಬದವರು ಮರ್ಯಾದೆಗೆ ಅಂಜಿ ಪ್ರಕರಣ ದಾಖಲಿಸಿರಲಿಲ್ಲ. ಇನ್ನೂ ಮದುವೆಯಾದ ಎರಡೆ ದಿನದಲ್ಲಿ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ ಪತಿ, ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನೆತ್ತಿದ್ದ ಪೊಲೀಸರಿಗೆ ಇದರ ಹಿಂದೆ ಭಾರಿ ಜಾಲ ಇರುವಬಹುದೆಂದು ಶಂಕೆ ವ್ಯಕ್ತಪಡಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಪತ್ನಿ ನಾಪತ್ತೆಯಾಗಿದ್ದಾಳೆ ದೂರು ದಾಖಲಾಗಿತ್ತು. ಈ ಪ್ರಕರಣದ ಪತ್ತೆಗೆ ಮುಂದಾದಾಗ ಮೇಲ್ನೋಟಕ್ಕೆ ಅನೇಕ ಸಂಶಯಗಳು ವ್ಯಕ್ತವಾಗಿದೆ. ಇದರ ಹಿಂದೆ ಭಾರಿ ಜಾಲದ ಇದೆಯೊ ಅಥವಾ ಕೌಟುಂಬಿಕ ಸಮಸ್ಯೆಯ ಕಾರಣದಿಂದ ನಾಪತ್ತೆಯಾಗಿದ್ದಾಳಾ ಎಂದು ಶೀಘ್ರದಲ್ಲಿ ಪತ್ತೆ ಮಾಡಲಿದ್ದೇವೆ. ಈ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ.

ಸಂತೋಷ ಶೆಟ್ಟಿ.

ಸಿಪಿಐ ಅಂಕೋಲಾ ಪೊಲೀಸ್ ಠಾಣೆ.

ನಡೆದದ್ದೇನು :

ಅಂಕೋಲಾದಿAದ 8 ಕೀಮಿ ಅಂತರದಲ್ಲಿರುವ ಗ್ರಾಮವೊಂದರ ವರನಿಗೆ ಜೂನ್. 21 ರಂದು ಸರಳವಾಗಿ ಮದುವೆಯಾಗಿತ್ತು. ಜೂನ್ 23 ರಂದು ದೇವಸ್ಥಾನಕ್ಕೆ ಪೂಜೆ ನೀಡಲು ಅಂಕೋಲಾದ ವೆಂಕಟರಮಣ ದೇವಸ್ಥಾನಕ್ಕೆ ತೆರಳಿದ್ದರು. ದೇವರ ಪೂಜೆ ನಡೆಯುತ್ರಿರುವಾಗಲೆ, ಹಿಂಬದಿಯಲ್ಲಿ ನಿಂತಿದ್ದ ಪತ್ನಿ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿತ್ರು. ಎಲ್ಲ ಹುಡುಕಿದರೂ ಪತ್ತೆಯಾಗದಿದ್ದಾಗ ಅಂಕೋಲಾ ಪೊಲೀಸರ ಬಳಿ ಪತಿ ಮೊರೆ ಹೋಗಿ ದೂರು ದಾಖಲಿಸಿದ್ದರು.

ಯಲ್ಲಾಪುರದ ಕಾಳಮ್ಮ ನಗರದವಳು ಎಂದು ವಧುವನ್ನು ಏಜೆಂಟರೊಬ್ಬರು ಪರಿಚಯಿಸಿ ಮದುವೆ ಮಾಡಿದ್ದರು. ಆದರೆ ನಾಪತ್ತೆಯಾದ ನಂತರ ಈ ವಿಳಾದದಲ್ಲಿ ಯಾರು ಇರಲಿಲ್ಲ ಎಂದು ತಿಳಿದುಬಂದಿದೆ. ಇತ್ತ ಮದುವೆ ಮಾಡಿಸಿದ ಏಜೆಂಟನು ಕೂಡ ಮಂಗಮಾಯನಾಗಿದ್ದಾನೆ.

 ಇದೊಂದು ಹೇಯ ವಿದ್ಯಮಾನವಾಗಿದೆ. ಮದುವೆಯಾದಂತೆ ನಾಟಕವಾಡಿ ಮೋಸ್ ಮಾಡುವ ಇಂತಹ ಕರಾಳ ಜಾಲದ ಪತ್ತೆಯನ್ನು ಪೊಲೀಸರು ಆದಷ್ಟು ಬೇಗ ಮಾಡುವಂತಾಗಲಿ. ಹಾಗೆ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನದ ಆಭರಣವನ್ನು ವರನಿಗೆ ವಾಪಸ್ ಕೊಡಿಸುವಲ್ಲಿ ಕಾರ್ಯಪ್ರವೃತ್ತರಾಗಲಿ.

ಸಚೀನ ಅಸ್ನೋಟಿಕರ. ಯುವ ಮೀನುಗಾರರ ಪ್ರಮುಖರು ಬೇಲೆಕೇರಿ.