ಅಂಕೋಲಾದಲ್ಲಿ ಡಕೋಟಾ ಎಕ್ಸಪ್ರೆಸ್‌ನ ಕಳಚಿ ಬಿದ್ದ ಡೊರ್ : ಅಂಕೋಲಾದಲ್ಲಿ ತಪ್ಪಿದ ಭಾರಿ ಅನಾಹುತ
ಕಳಚಿ ಬಿದ್ದ ಬಾಗಿಲನ್ನು ಹಿಡಿದುಕೊಂಡೆ ನಿಲ್ದಾಣದ ತನಕ ಬಂದ ನಿರ್ವಾಹಕ


ವರದಿ : ಕಿರಣ ಗಾಂವಕರ. ಹನುಮಟ್ಟಾ.
ಅಂಕೋಲಾ : ಚಲಿಸುತ್ತಿರುವ ಸಾರಿಗೆ ಬಸ್‌ನ, ಬಾಗಿಲು (ಡೊರ್) ಕಳಚಿ ಬಿದ್ದು ಆತಂಕ ಸೃಷ್ಠಿಸಿದ ಘಟನೆ ಅಂಕೋಲಾದಲ್ಲಿ ಶನಿವಾರ ನಡೆದಿದೆ.


ಹಾವೇರಿ ಘಟಕದ ಬಸ್ ಇದಾಗಿದ್ದು, ಮದ್ಯಾಹ್ನ 12-45 ಕ್ಕೆ ಅಂಕೋಲಾದ ನಿಲ್ದಾಣಕ್ಕೆ ಬಸ್ ಹತ್ತಿರ ಬರುತ್ತಿದ್ದಂತೆ ಬಸ್‌ನ ಬಾಗಿಲು ಕಳಚಿ ಬಿದ್ದಿದೆ. ಕಳಚಿ ಬಿದ್ದ ಬಾಗಿಲನ್ನು ಹಿಡಿದುಕೊಂಡೆ ನಿರ್ವಾಹಕ ಹೇಗೊ ಹೀಗೊ ನಿಲ್ದಾಣದ ತನಕ ಬಸ್‌ನ್ನು ತಂದು ನಿಲ್ಲಿಸಿದ್ದಾರೆ. ನಂತರ ಬಸ್‌ನ ಚಾಲಕ- ನಿರ್ವಾಹಕ ಸೇರಿ ತಾತ್ಕಾಲಿಕವಾಗಿ ಬಾಗಿಲನ್ನು ಬಸ್‌ಗೆ ಅಳವಡಿಸಿ ಮುಂದೆ ಸಾಗಿದ್ದಾರೆ.

ತಮ್ಮ ಲಾಭಗೋಸ್ಕರ ಡಕೋಟಾ ಸಾರಿಗೆ ಬಸ್‌ಗಳನ್ನು ಇಟ್ಟುಕೊಂಡು, ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟ ಆಡಿದ ಈ ಘಟನೆಯ ಬಗ್ಗೆ ಸಾಕಷ್ಟು ಆಕ್ಷೇಪ ಮಾತು ಕೇಳಿ ಬಂದಿದೆ.ಹಾವೇರಿ ಘಟಕದ KA27F515 ಎಂಬ ಬಸ್ಸು ಗುಜರಿಗೆ ಹಾಕುವ ಬಸನ್ನು ಪ್ರತಿನಿತ್ಯ ಹಾವೇರಿಯಿಂದ-ಕಾರವಾರಕ್ಕೆ ಹಾಗೂ ಅದೇ ಬಸ್ಸು ಕಾರವಾರದಿಂದ – ಹಾವೇರಿಗೆ. ಶಿರಸಿ ಮಾರ್ಗವಾಗಿ ಓಡಿಸಲಾಗುತ್ತಿದೆ.

ಈ ಬಸ್ಸನ್ನು ಹತ್ತಲು ಪ್ರಯಾಣಿಕರು ತಮ್ಮ ಪ್ರಾಣವನ್ನು ಕೈಯಲ್ಲಿಟ್ಟು ಭಯದಲ್ಲಿ ಹೋಗಬೇಕಾದ ಸನ್ನಿವೇಶ ಉಂಟಾಗಿದೆ. ಕೇಂದ್ರ ಸರ್ಕಾರ ಆರ್.ಟಿ.ಓ ( ಸಾರಿಗೆ ನಿಯಮ)ಗೆ ಸಂಬAಧಿಸಿದಂತೆ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಕೆಎಸ್‌ಆರ್‌ಟಿಸಿ 9 ಲಕ್ಷ ಕಿಲೋಮೀಟರ್ ಓಡಿದ ಬಸ್‌ಗಳನ್ನು ಸ್ಕ್ಯಾಪ್ (ಗುಜರಿ) ಮಾಡಬೇಕಾಗಿದೆ.

ಆದರೆ ಕೇಂದ್ರ ಸರ್ಕಾರದ ಸಾರಿಗೆ ನೀತಿ ಜಾರಿಯಲ್ಲಿದ್ದರೂ ನಮ್ಮ ರಾಜ್ಯದಲ್ಲಿ ಪಾಲನೆಯಾಗದೇ ಇರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಜನರ ಜೀವನದ ಜೊತೆ ಚೆಲ್ಲಾಟ ಆಡುವ ಹಾವೇರಿ ಘಟಕದ ಈ ಬಸನ್ನು ಸಂಚಾರಕ್ಕೆ ಬಳಸದೆ ಗುಜರಿಗೆ ಹಾಕಿ, ಫಿಟ್ನೆಸ್ ಇರುವ ಬಸನ್ನು ಹಾವೇರಿ- ಕಾರವಾರ ಮಾರ್ಗವಾಗಿ ಸಂಚರಿಸಲು ಸೂಕ್ತ ಕ್ರಮ ಕೈಗೊಂಡು, ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಮನ ಕೊಡಬೇಕೆಂದು. ಪ್ರಯಾಣಿಕರ ಆಗ್ರಹವಾಗಿದೆ.