ಅಂಕೋಲಾ : ಬೆಳಗಾವಿಯ ಕೆ.ಎಲ್.ಇ.ಸಂಸ್ಥೆಯ ಸಹ ಪ್ರಾಧ್ಯಪಕ, ಕ್ರೀಯಾಶೀಲ ವ್ಯಕ್ತಿತ್ವದ ಡಾ.ಸಂಜೀವ.ಆರ್.ನಾಯಕ ಅವರಿಗೆ ಡಾ. ಅಬ್ಧುಲ್ ಕಲಾಂ ಸೇವಾ ರತ್ನ ಪ್ರಶಸ್ತಿ ಭಾಜನವಾಗಿದೆ.
ಖಿದ್ಮಾ ಪೌಂಡೇಶನನ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಕೊಡ ಮಾಡುವ ಈ ಪ್ರಶಸ್ತಿಯನ್ನು ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಜುಲೈ 9 ರ ಭಾನುವಾರದಂದು ನಡೆಯಲಿರುವ ಖಿದ್ಮಾ ಕಾವ್ಯ ಮತ್ತು ಸಾಂಸ್ಕೃತಿಕ ಸಂಭ್ರಮ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಧಾನ ಮಾಡಲಾಗುತ್ತಿದೆ.
ಕರ್ನಾಟಕದ ಸೂಕ್ತ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಿದ ಖಿದ್ಮಾ ಪೌಂಡೇಶನ ಪ್ರಸಕ್ತ ವರ್ಷ ಡಾ. ಅಬ್ಧುಲ್ ಕಲಾಂ ಸೇವಾ ರತ್ನ ಪ್ರಶಸ್ತಿಯನ್ನು ಅಂಕೋಲಾ ಮೂಲದ, ಸಹ ಪ್ರಾಧ್ಯಪಕ ಡಾ.ಸಂಜೀವ.ಆರ್.ನಾಯಕ ಅವರ ಶಿಕ್ಷಣ ಸಂಶೋಧನೆ ಮತ್ತು ಉತ್ತರ ಕರ್ನಾಟಕದ ಸಾಮಾಜಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆಯ ಗಮನಿಸಿ ಆಯ್ಕೆ ಮಾಡಲಾಗಿದೆ.
ಡಾ.ಸಂಜೀವ.ಆರ್.ನಾಯಕ ಅವರು ಈ ಹಿಂದೆ ಸುಮಾರು 25 ವರ್ಷಗಳ ಕಾಲ ಉಕ ಜಿಲ್ಲೆಯ ಅಂಕೋಲಾ ಮತ್ತು ಕಾರವಾರ ಜಿಲ್ಲೆಯಲ್ಲಿ ಜ್ಞಾನ ವಿಕಾಶ ಕೇಂದ್ರ ಮತ್ತು ಜ್ಞಾನಜ್ಯೋತಿ ಮತ್ತು ಏಷಿಯನ್ ಕಂಪ್ಯೂಟರ ಸೆಂಟರ್ ಮತ್ತು ಉತ್ತರ ಕನ್ನಡ ಜಿಲ್ಲಾ ಸಾಮಾಜಿಕ ಶೈಕ್ಷಣಿಕ ಉತ್ತೇಜನ ಸಮಿತಿಯಡಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.
ಮುಖ್ಯವಾಗಿ ಹಲವಾರು ಈ ಭಾಗದ ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಇಂಜನಿಯಿರಿಂಗ್ ಮತ್ತು ಇನ್ನಿತರ ಕೋರ್ಸಗಳಿಗೆ ಆಯ್ಕೆಯಾಗಲು ಕಾರಣಿಭೂತರಾಗಿದ್ದಾರೆ. ಇವರ ನೇತ್ರತ್ವದ ಕೇಂದ್ರದಲ್ಲಿ ತರಭೇತಿ ಪಡೆದವರು ದೇಶ-ವಿದೇಶದಲ್ಲಿ ಉನ್ನತ ಸ್ಥಾನದಲ್ಲಿ ಉದ್ಯೋಗದಲ್ಲಿದ್ದಾರೆ.
ಶ್ರೀಯತ ರಾಮಚಂದ್ರ ಮತ್ತು ಚಂದ್ರಭಾಗಿಯವರ ದಂಪತಿಗಳ ಹಿರಿಯ ಮಗನಾಗಿ ಸಂಜೀವ .ಆರ್.ನಾಯಕ 29-04-1967 ಜನಿಸಿದ್ದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಮತ್ತು ಕಾಲೇಜ ಶಿಕ್ಷಣವನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಮುಗಿಸಿ ಆನಂತರ ಎಂ.ಎ.ಎಮ್ ಪಿಲ್.ಡಿಜಿಎಸ್ ಪದವಿಗಳನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದರು.
1992 ರಿಂದ 2004 ರವರಗೆ ಗೋಖಲೆ ಸೆಂಟರಿ ಕಲಾ ವಿಜ್ಙಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಅಂಕೋಲಾ ಮತ್ತು ಶಿವಾಜಿ ಕಲಾ ವಾಣಿಜ್ಯ ಮಹಾವಿದ್ಯಾಲಯ ಕಾರವಾರದಲ್ಲಿ 12 ವರ್ಷಕಾಲ ಅತಿಥಿ ಉಪನ್ಯಾಸಕಾರಾಗಿ ಕಾರ್ಯನಿರ್ವಹಿಸಿದ್ದಾರೆ.
2005ರ ನಂತರ ಯ.ಜಿ.ಸಿ ಯೋಜನೆಯಡಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ ಮಾಡಿ ಖಾಯಂ ಪ್ರಾಧ್ಯಾಪಕರಾಗಿ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯಲ್ಲಿ ನೇಮಕಗೊಂಡರು.
ಆ ನಂತರ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುತ್ತಾ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ./ಬಿಕಾಂ/ ಬಿಎಸ್ಸಿ ಎಲ್ಲಾ ತರಗತಿಗಳ ತರಗತಿಗಳ ಪದವಿ ಓದುತ್ತಿರುವ ವಿಧ್ಯಾರ್ಥಿಗಳ ಪಠ್ಯಪುಸ್ತಕ ರಚನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಅಂತರ ರಾಷ್ಟ್ರೀಯ ಸಂಶೋಧನಾ ಮ್ಯಾಗಜಿನ್ ಪ್ರತಿಕೆಯ ನ್ಯೂ ಡೆಲ್ಲಿ ಅಕ್ಕಿನಿಕ್ಕಿ ಪಬ್ಲಿಕೇಷನ್ ಇದರ ಉಪ ಸಂಪದಾಕರಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ 15 ಕ್ಕೂ ಹೆಚ್ಚು ಅಂತರ್ ರಾಷ್ಟ್ರೀಯ ಪ್ರತಿಕೆಯಲ್ಲಿ ವಿವಿಧ ಸಾಮಾಜಿಕ ಮತ್ತು ಸಂಶೋಧನಾ ಸಂಭಂದಿತ ಲೇಖನಗಳು ಪ್ರಕಟಿಸಿ ಹಿರಿಮೆ ಪಾತ್ರರಾಗಿದ್ದಾರೆ.
ಹಾಗೇಯೆ 40 ಕ್ಕೂ ಹೆಚ್ಚು ಅಂತರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪತ್ರಿಕೆ ಮಂಡನೆ ಮಾಡಿದ್ದಾರೆ. ಹಾಗೂ 300 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪತ್ರಿಕೆ ಮಂಡಿಸಿದ್ದಾರೆ.
ಎರಡು ವಿಶ್ವವಿದ್ಯಾಲಯಗಳ (ಬಿ.ಓ.ಎಸ್/ಬಿ.ಓ.ಇ) ಪಠ್ಯಪುಸ್ತಕ ಮಂಡಳಿಯ ಸದ್ಯಸರಾಗಿ ಕಾರ್ಯನಿರ್ವಹಿಸಿದ ಡಾ.ಸಂಜೀವ.ಆರ್.ನಾಯಕ ಉತ್ತರ ಕರ್ನಾಟಕದಲ್ಲಿ ಹಲವು ಸಂಘ ಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯದಲ್ಲಿ ನಿರಂತರವಾಗಿರುವದನ್ನು ಗಮನಿಸಿ ಇವರಿಗೆ ಶಿಕ್ಷಣ ಸಂಶೋಧನೆ ಮತ್ತು ಉತ್ತರ ಕರ್ನಾಟಕದ ಸಾಮಾಜಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಗುರುತಿಸಿ ಈ ವರ್ಷದ ಡಾ.ಅಬ್ಧುಲ್ ಕಲಾಂ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವದು ಅಂಕೋಲಾ ಸಂದ ಹಿರಿಮೆಯ ಗರಿಯಾಗಿದೆ.

