ಕಾರವಾರ: ಪ್ರಥಮ ಬಾರಿಗೆ ಕಾರವಾರಕ್ಕೆ ಆಗಮಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಜನಶಕ್ತಿ ವೇದಿಕೆಯು ಉತ್ತರ ಕನ್ನಡದ ಉತ್ಪನ್ನಗಳನ್ನ ನೀಡುವ ಮೂಲಕ ಸ್ವಾಗತಿಸಿಕೊಂಡಿತು.
ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಲು ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಚಿವರನ್ನ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹಾಗೂ ಇತರ ಪದಾಧಿಕಾರಿಗಳು ನಗುಮುಖದಿಂದ ಸ್ವಾಗತಿಸಿಕೊಂಡರು. ಇದೇ ವೇಳೆ ಎಲ್ಲೆಡೆ ಪ್ರಸಿದ್ಧವಾಗಿರುವ ಉತ್ತರ ಕನ್ನಡದ ಅಪ್ಪೆಮಿಡಿ ಉಪ್ಪಿನಕಾಯಿ, ಜೇನುತುಪ್ಪ, ಜೋನಿಬೆಲ್ಲವನ್ನ ಕರಾವಳಿಯ ಹೆಗ್ಗುರುತಾಗಿರುವ ಮೀನುಗಾರರ ಬೋಟಿನ ಮಾದರಿಯಲ್ಲಿರಿಸಿ ಜನಶಕ್ತಿ ವೇದಿಕೆಯಿಂದ ಕಂದಾಯ ಸಚಿವರಿಗೆ ಉಡುಗೊರೆಯಾಗಿ ನೀಡಲಾಯಿತು. ಸಚಿವರಿಗೆ ಸಾಂಪ್ರದಾಯಿಕವಾಗಿ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಜಿಲ್ಲೆಯ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಜನಶಕ್ತಿ ವೇದಿಕೆಯಿಂದ ಸಚಿವರಿಗೆ ಮನವಿ ಸಲ್ಲಿಸಿ, ಕ್ರಮಕ್ಕೆ ಆಗ್ರಹಿಸಲಾಯಿತು.
ಪ್ರಮುಖರಾದ ಸತೀಶ್ ಬೇಳೂರಕರ, ಸುರೇಶ್ ನಾಯ್ಕ, ಸಿ.ಎನ್.ನಾಯ್ಕ, ಬಾಬು ಶೇಖ್, ಅಲಿ ಸದಾಶಿವಗಡ, ನಿತ್ಯಾನಂದ ನಾಯ್ಕ (ಮಾವಿನಕೇರಿ), ರಾಜೀವ್ ನಾಯ್ಕ, ನಿವೃತ್ತ ಪ್ರಾಂಶುಪಾಲ ಶಿವಾನಂದ ನಾಯಕ, ಕಾಶೀನಾಥ್ ನಾಯ್ಕ, ಚಂದ್ರಕಾ0ತ ನಾಯ್ಕ, ಸೂರಜ್ ಕುರುಮಕರ್ ಮುಂತಾದವರು ಈ ವೇಳೆ ಹಾಜರಿದ್ದರು.

