ಅಂಕೋಲಾ : ಮಾನವ ಹಕ್ಕುಗಳ ರಕ್ಷಣಾ ಪರಿಷತನ ತಾಲೂಕು ಅಧ್ಯಕ್ಷರಾಗಿ, ಕ್ರೀಯಾಶೀಲ ವ್ಯಕ್ತಿತ್ವದ ಸೂರಜ್ ನಾಯ್ಕ. ಶಿರೂರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹರೀಶ್ ನಾಯ್ಕ. ಶೇಡಿಕುಳಿ, ಮಹಿಳಾ ಉಪಾಧ್ಯಕ್ಷರಾಗಿ ಸುಪ್ರಿಯಾ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಗೌಡ. ಸಹ ಕಾರ್ಯದರ್ಶಿಯಾಗಿ ರಘುನಾಥ ನಾಯ್ಕ, ಖಜಾಂಚಿಯಾಗಿ ಸುಭಾಷ ನಾಯ್ಕ, ಮುಖ್ಯ ಸಂಘಟನಾ ಕಾರ್ಯದರ್ಶಿಯಾಗಿ ನಾಗಪ್ಪ ಹರಿಕಾಂತ. ಪತ್ರಿಕಾ ಮಾಧ್ಯಮದ ಸದಸ್ಯರಾಗಿ ಐಶ್ವರ್ಯ ನಾಯ್ಕ, ಸಹ ಸಂಘಟನಾ ಕಾರ್ಯದರ್ಶಿಯಾಗಿ ವಿವೇಕ್ ಐಗಳ. ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ದಿಲೀಪ್ ನಾಯ್ಕ, ಅಶೋಕ್ ಬಂಟ, ಉದಯ್ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಉಕ ಜಿಲ್ಲಾ ಮಾನವ ಹಕ್ಕುಗಳ ರಕ್ಷಣಾ ಪರಿಷತನ ಉಪಾಧ್ಯಕ್ಷ ಕಿರಣ್ ಗಾಂವಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಉತ್ಸಾಹಿ ಯುವ ಪ್ರತಿಭೆಗಳ ಸಹಭಾಗಿತ್ವದಲ್ಲಿ ವಿದ್ಯಾವಂತ ಯುವಕರನ್ನು ಒಳಗೊಂಡ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಸಂಘಟನೆಯು ಅಂಕೋಲಾ ತಾಲೂಕಿನಲ್ಲಿ ಆಸ್ತಿತ್ವಕ್ಕೆ ಬಂದಿದೆ. ಮಾನವ ಹಕ್ಕುಗಳ ರಕ್ಷಣಾ ಪರಿಷತನ ರಾಜ್ಯ ಘಟಕ ಸಿರಸಿಯಲ್ಲಿದ್ದು ಗಣೇಶ್ ನಾಯ್ಕ ಅವರು ರಾಜ್ಯಾಧ್ಯಕ್ಷರಾಗಿದ್ದಾರೆ.
ಅಮಾಯಕ ಜನರಿಗೆ, ಬಡವರಿಗೆ ಕೂಲಿ ಕಾರ್ಮಿಕ ಜನರಿಗೆ ಸರ್ಕಾರಿ ಯೋಜನೆಗಳ ತಿಳುವಳಿಕೆ ನೀಡುವುದು, ಅನ್ನ ಆಹಾರ ಇಲ್ಲದ ಭಿಕ್ಷುಕರಿಗೆ ಮಾನವೀಯತೆ ತೋರಿಸಿ ಸಹಾಯ ಹಸ್ತ ನೀಡಲು ಮಾನವ ಹಕ್ಕು ರಕ್ಷಣಾ ಪರಿಷತ್ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ ಎಂದು ಉಕ ಜಿಲ್ಲಾ ಮಾನವ ಹಕ್ಕುಗಳ ರಕ್ಷಣಾ ಪರಿಷತನ ಉಪಾಧ್ಯಕ್ಷ ಕಿರಣ್ ಗಾಂವಕರ್ ಅವರು ತಿಳಿಸಿದ್ದಾರೆ.
ಯುವಶಕ್ತಿ ರಾಷ್ಟ್ರದ ಶಕ್ತಿ. ಯುವಕರೇ ದೇಶದ ಬೆನ್ನೆಲುಬು. ಇವೆಲ್ಲಾ ಯುವ ಸಮುದಾಯದ ಬಗ್ಗೆ ಪ್ರಚಲಿತದಲ್ಲಿರುವ ಮಾತು. ಯುವಶಕ್ತಿಯ ಸದ್ಬಳಕೆಗೆ ಸಂಘಟನೆ ಅವಶ್ಯ. ಹೀಗೆ ಸಂಘಟನೆ ರೂಪ ಪಡೆದು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿ ಎಂಬ ಸದುದ್ದೇಶದಿಂದ ಜನ್ಮ ತೆಳದಿದ್ದ ಅನೇಕ ಯುವ ಸಂಘಟನೆಗಳು ಇಂದು ಕಾಲಗರ್ಭ ಸೇರುತ್ತಿವೆ. ಇದಕ್ಕೆ ಅಂಕೋಲಾ ತಾಲೂಕು ಹೊರತಾಗಿಲ್ಲ.
ಹಲವು ವರ್ಷಗಳ ಹಿಂದೆ ಅಂದರೆ 1970 ರಿಂದ 2002 ರ ವರೆಗೆ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಗ್ರಾಮಗಳಲ್ಲೂ ಯುವಕ, ಯುವತಿ ಮಂಡಳಗಳು ಜನ್ಮತಾಳಿದ್ದವು. ಅವುಗಳು ಜನಪರ ಸಾಮಾಜಿಕ ಕಾರ್ಯಗಳ ಜತೆಗೆ ಸಾಂಸ್ಕೃತಿಕ ಬಿರುಗಾಳಿ ಬೀಸಿದ್ದವು ಎಂದರೂ ತಪ್ಪಾಗಲಾರದು. ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಕುಂದುಕೊರತೆಗಳಿಗೆ ಸ್ಪಂದಿಸಿ ಸಂಬAಧಿಸಿದವರ ಗಮನಸೆಳೆಯುವುದರೊಂದಿಗೆ ಅನೇಕ ಜನಪದ ಕಲೆಗಳನ್ನು ಪೋಷಿಸುವ ಉದ್ದೇಶದಿಂದ ಕಾರ್ಯನಿರತವಾಗಿದ್ದವು.
ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹದಾಯಕ ಕೆಲಸ ಯುವಕ, ಯುವತಿ ಮಂಡಳಿಗಳಿAದ ಸಾಗಿತ್ತು. ಇತ್ತೀಚಿನ ದಿನಗಳಲ್ಲಿ ಸಂಘಟನೆಗಳು ಬೆರಳೆಣಿಕೆಯಲ್ಲಿ ಮಾತ್ರ ಉಳಿದಿದ್ದು, ಗ್ರಾಮೀಣ ಕಲೆ, ಕ್ರೀಡೆ, ಸಂಸ್ಕ್ರತಿಗಳು ಮರೆಯಾಗುತ್ತಿವೆಯಾ ಎಂಬ ಸಂಶಯ ಮೂಡುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿಯ ಧ್ಯೋತಕವಾಗಿ, ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಮಾನವ ಹಕ್ಕುಗಳ ರಕ್ಷಣಾ ಪರಿಷತನ ಅಶ್ತಿತ್ವಕ್ಕೆ ಬಂದಿದೆ ಎಂದು ಕಿರಣ ಗಾಂವಕರ ತಿಳಿಸಿದ್ದಾರೆ.
