ಅಂಕೋಲಾ : ತಾಲೂಕಿನ ರಾಮನಗುಳಿ ವಲಯದ ಅರಣ್ಯಾಧಿಕಾರಿ ರಾಘವೇಂದ್ರ ಮಳ್ಳಪ್ಪನವರ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಹಾವೇರಿಯ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಜರುಗಿದ ಈ ಅದ್ದೂರಿ ವಿವಾಹ ಸಮಾರಂಭದಲ್ಲಿ ರಾಘವೇಂದ್ರ ಅವರು ಸೌಭಾಗ್ಯ ಅವರೊಂದಿಗೆ ಸಪ್ತಪದಿ ತುಳಿದರು

ಶುಭ ಮುಹೂರ್ತದಲ್ಲಿ ಜರುಗಿದ  ಈ ಮುದುವೆ ಸಮಾರಂಭದಲ್ಲಿ  ನವ ದಂಪತಿಗಳಿಗೆ  ಆಪ್ತೇಷ್ಠರು, ಹಿತೈಷಿಗಳು, ಕುಟುಂಬದವರು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಶುಭ ಹಾರೈಸಿ ಹರಿಸಿದರು

ಸಿಸಿಎಫ್ ವಸಂತ ರೆಡ್ಡಿ, ಸಾಮಾಜಿಕ ಅರಣ್ಯ ವಿಭಾಗದ ಡಿಎಫ್ಓ ಮಂಜುನಾಥ ನಾವಿ, ಆರ್.ಎಫ್.ಓ. ಗಳಾದ ಗಣಪತಿ ನಾಯಕ, ವಿ.ಪಿ.ನಾಯ್ಕ, ಸುರೇಶ ನಾಯ್ಕ, ರಾಘವೇಂದ್ರ ಕಾರವಾರ, ಅನ್ನಪೂರ್ಣ ಸೌಹಾರ್ದ ನಿಯಮಿತದ ಉಪಾಧ್ಯಕ್ಷರು ಹಾಗೂ ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷರು ಆದ ಗೋಪು ನಾಯಕ. ಅಡ್ಲೂರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ರಂಜು ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದ ಶುಭ ಕೋರಿದರು.

ಕ್ರೀಯಾಶೀಲ ವ್ಯಕ್ತಿತ್ವದ ರಾಘವೇಂದ್ರ ಮಳ್ಳಪ್ಪನವರು ರಾಮನಗುಳಿ ವಲಯದ ಅರಣ್ಯಾಧಿಕಾರಿಯಾಗಿ ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಮ್ಮ ವಿಶಿಷ್ಟ ಕರ್ತವ್ಯ ಶೈಲಿಯ ಮೂಲಕ ಎಲ್ಲರ ಪ್ರೀತಿ ಸಂಪಾದಿಸಿರುವ ಆರ್ . ಎಫ್. ಓ ರಾಘವೇಂದ್ರ ಅವರು ಖಡಕ್ ಅಧಿಕಾರಿಯಾಗಿ ಗಮನ ಸೆಳೆದಿದ್ದಾರೆ. ಅರಣ್ಯ ಇಲಾಖೆಯಲ್ಲಿ ವಿನೂತನ ಪ್ರಯೋಗಗಳ ಮೂಲಕ ಇಲಾಖೆಯ ಹಿರಿಮೆಗೆ ಗರಿ ಮೂಡಿಸಿದ್ದಾರೆ.