ಪ್ರತ್ಯಕ್ಷ ಚಿತ್ರಣ : ದಿನಕರ ನಾಯ್ಕ. ಅಲಗೇರಿ.
ವರದಿ : ರಾಘು ಕಾಕರಮಠ.
ಅಂಕೋಲಾ : ಬಸ್ ನಿಲ್ಲಿಸುವಂತೆ ಒತ್ತಾಯಿಸಿದ್ದ ಪ್ರಯಾಣಿಕನ ಮೇಲೆ ಮಹಿಳಾ (ಕಂಡಕ್ಟರ್) ವೊಬ್ಬಳು ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯ ಘಟನೆ ಅಂಕೋಲಾ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹೌದು.. ಅಂಕೋಲಾ ಬಸ್ ನಿಲ್ದಾಣವು ಸೋಮವಾರ ಮದ್ಯಾಹ್ನ ಒಂದು ವಿಲಕ್ಷಣ ಘಟನೆಗೆ ಸಾಕ್ಷಿಯಾಗಿತ್ತು. ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮಹಿಳಾ ನಿರ್ವಾಹಕಿಯೊಬ್ಬಳು ಥಳಿಸಿ, ಪ್ರಯಾಣಿಕನನ್ನ ದರದರನೆ ಎಳೆದು ತಂದು ತನ್ನ ಪ್ರಲಾಪ ತೋರಿಸಿದ ಘಟನೆಯು ಚರ್ಚೆಗೆ ಗ್ರಾಸವಾಗಿದೆ.
ಅಷ್ಟಕ್ಕೂ ಅಲ್ಲಿ ನಡೆದದ್ದಾದರೂ ಏನೆಂದರೆ ಸೋಮವಾರ ಸಂಜೆ ವೇಳೆ ಕಾರವಾರದಿಂದ ಅಂಕೋಲಾಕ್ಕೆ ಲೋಕಲ್ ಸಾರಿಗೆ ಬಸನಲ್ಲಿ ಕಾರವಾರದಿಂದ ಅಂಕೋಲಾಕ್ಕೆ ಹೊನ್ನಾವರದ ಪ್ರಯಾಣಿಕರೊಬ್ಬರು ಪ್ರಯಾಣಿಸಿದ್ದರು.
ಅಂಕೋಲಾ ಬಸ್ ನಿಲ್ದಾಣ ಬರುತ್ತಿದ್ದಂತೆ ಬಸ್ ನಿಲ್ಲಿಸುವಂತೆ ನಾನು ಒತ್ತಾಯಿಸಿದ್ದೆ. ಇದರಿಂದ ಕೆರಳಿದ ನಿರ್ವಾಹಕಿ ಬಸ್ ನಲ್ಲಿಯೆ ತೀವ್ರ ಹಲ್ಲೆ ನಡೆಸಿದ್ದಾಳೆ. ಬಸ್ ನಿಂದ ಎಳೆದು ತಂದು ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ್ದಾಳೆ ಎಂದು ಪ್ರಯಾಣಿಕ ನಿಲ್ಧಾಣದ ಕಂಟ್ರೋಲರ ಅಶೋಕ ನಾಯ್ಕ ಅವರ ಮುಂದೆ ತನ್ನ ಅಸಹಾಯಕತೆ ಹೇಳಿಕೊಂಡಿದ್ದಾರೆ.
ಸಾರಿಗೆ ನಿರ್ವಾಹಕಿ ಈ ಬಗ್ಗೆ ಪ್ರತಿಕೃಯಿಸಿ ನನ್ನೊಡನೆ ಅಸಭ್ಯವಾಗಿ ವರ್ತಿಸಿ, ಈ ಬಸ್ ನಿಮ್ಮ ಅಪ್ಪನದಾ ಅಂತಾ ಈತ ಕೇಳಿದ್ದರಿಂದ ನನ್ನ ಸಿಟ್ಟು ನೆತ್ತಿಗೆ ಏರಿತ್ತು. ಮುಂದೆ ಏನು ಆಯಿತು ಅಂತಾ ನಂಗೆ ತಿಳಿದಿಲ್ಲ ಎಂದಿದ್ದಾರೆ.
ಒಟ್ಟಾರೆ ಈ ವಿದ್ಯಮಾನ ಸಾರ್ವಜನಿಕರ ಕಣ್ಣಿಗೆ ಹಬ್ಬವಾಗಿ ಚಪ್ಪರಿಸುವಂತೆ ಮಾಡಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯಾನುಸತ್ಯತೆ ಬಯಲಿಗೆ ಬರಬೇಕಿದೆ ಎಂದು ಪ್ರಜ್ಞಾವಂತರ ಆಗ್ರಹವಾಗಿದೆ.