ಅಂಕೋಲಾ : ತಾಲೂಕಿನ ಶಾಂತಿ ಸಾಗರ ಹೊಟೇಲ ಪಕ್ಕದ ಚತುಷ್ಪಥ ಹೆದ್ದಾರಿಯಲ್ಲಿ ಔಷಧಿ ತುಂಬಿದ ಟಾಟಾಎಸ್ ವಾಹಕ್ಕೆ ಬೆಂಕಿ ತಗುಲಿ ಔಷದಿ ಸುಟ್ಟು ಕರಕಲಾದ ಘಟನೆ ನಡೆದಿದೆ.
ಕಾರವಾರದಿಂದ ಹೊನ್ನಾವರ ಪಶು ಆಸ್ಪತ್ರೆಗೆ ಟಾಟಾ ಎಸ್ ವಾಹನದಲ್ಲಿ ಔಷಧಿ ಸಾಗಿಸಲಾ ಗುತ್ತಿತ್ತು.ಊಟದ ಸಮಯವಾದುದರಿಂದ ಚಾಲಕ ವಾಹನವನ್ನು ನಿಲ್ಲಿಸಿ ಊಟಕ್ಕೆ ತೆರಳಿದ್ದ ಎಂದು ತಿಳಿದು ಬಂದಿದೆ.

ಇದೆ ಸಮಯಕ್ಕೆ ಈ ವಾಹನದಲ್ಲಿ ಚಿಕ್ಕ ಹೊಗೆ ಕಾಣಿಸಿಕೊಂಡು ತಕ್ಷಣ ನೋಡಿದ ಚಾಲಕ ನಂದಿಸಲು ಪ್ರಯತ್ನ್ ಪಟ್ಟರು ಆಗದೆ ಅಗ್ನಿ ಶಾಮಕ ಠಾಣೆಯವರಿಗೆ ತಿಳಿಸಿದ ತಕ್ಷಣ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಆಗಮಿಸಿ ಬೆಂಕಿ ಆರಿಸಲು ಪ್ರಯತ್ನಿಸಿದರು. ವಾಹನಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಔಷದಿಗೆ ಬೆಂಕಿ ತಾಗಿ ಏಕಾಏಕಿ ಬೆಂಕಿ ಉರಿದಿದೆ. ಅಗ್ನಿ ಶಾಮಕ ಠಾಣೆಯವರ ಆಗಮನದಿಂದ ವಾಹನಕ್ಕೆ ಅಷ್ಟೇನು ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ.
