ಅಂಕೋಲಾ: ಹಳಿಯಾಳದ ವಕೀಲರ ಸಂಘದ ಅಧ್ಯಕ್ಷ  ಎಂ.ವಿ. ಅಸ್ಟೇಕರ್ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ವಕೀಲರ ಹಿತರಕ್ಷಣಾ ಅಧಿನಿಯಮ ಶೀಘ್ರ ಜಾರಿಗೆ ತರಲು ಆಗ್ರಹಿಸಿ ಅಂಕೋಲಾದ ವಕೀಲರ ಸಂಘದ ವತಿಯಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 

ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ ಮಾತನಾಡಿ ಹಳಿಯಾಳ ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಎಂ.ವಿ. ಅಸ್ಟೇಕರ ಅವರ ಮೇಲೆ ಓರ್ವ ಕಕ್ಷಿದಾರ ಮಾರಣಾಂತಿಕ ಹಲ್ಲೆ ನಡೆಸಿ ಕಾನೂನು ಉಲ್ಲಂಘಿಸಿದ್ದಲ್ಲದೆ ಕ್ರೌರ್ಯ ಮೆರೆದಿದ್ದಾನೆ. ಇಂತಹ ಘಟನೆ ಖಂಡನೀಯವಾಗಿದೆ.

ವಕೀಲರು ಸಾರ್ವಜನಿಕವಾಗಿ ಕೆಲಸ ಮಾಡುವುದರಿಂದ ಅವರಿಗೆ ತಮ್ಮ ಕೆಲಸ ನಿರ್ವಹಿಸುವಾಗ ರಕ್ಷಣೆಯ ಅಗತ್ಯವಿರುತ್ತದೆ. ಆದ್ದರಿಂದ ವಕೀಲರ ಸಂರಕ್ಷಣಾ ಅಧಿನಿಯಮವನ್ನು ಅತೀ ಶೀಘ್ರವಾಗಿ ಜಾರಿಗೆ ತರಬೇಕು ಮತ್ತು ವಕೀಲರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನಿನ ಪ್ರಕಾರ ಶೀಘ್ರವಾಗಿ ಸೂಕ್ತ ಕ್ರಮವನ್ನು ಜರುಗಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ವಕೀಲರ ಸಂಘದ ಉಪಾಧ್ಯಕ್ಷ ನಿತ್ಯಾನಂದ ಕವರಿ, ಖಜಾಂಚಿಯಾಗಿ ರಾಮಚಂದ್ರ ಗೌಡ, ಸಹಕಾರ್ಯದರ್ಶಿ ಮಮತಾ ಕೆರೆಮನೆ, ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗಾನಂದ ಬಂಟ, ಉಮೇಶ ನಾಯ್ಕ, ಎಂ.ಪಿ,ಭಟ್ಟ, ಸುಭಾಷ ನಾರ್ವೇಕರ, ಸುರೇಶ ಬಾನಾವಳಿಕರ, ಬಿ.ಡಿ.ನಾಯ್ಕ, ಗಜಾನನ ನಾಯ್ಕ, ಪ್ರತಿಭಾ ನಾಯ್ಕ, ತೇಜಾ ಬಂಟ್, ಹೀನಾ ಕೌಸರ್, ಜಗದೀಶ ಹಾರ್ವಾಡೇಕರ್, ರಾಜು ಹರಿಕಂತ್ರ, ವಿ.ಟಿ.ನಾಯಕ, ಮೌನೀಶ್ ಆನಂದಗಿರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.