ಅಂಕೋಲಾದಲ್ಲಿ ನಡೆದ ಆತ್ಮಹತ್ಯೆ ಪ್ರಕರಣವೊಂದಕ್ಕೆ ಮರುಜೀವ :

ಯುಪಿಯಿಂದ ಆಗಮಿಸಿ ತನಿಖೆ ಕೈಗೊಂಡ ಪೊಲೀಸ್ ತಂಡ

ವರದಿ ದಿನಕರ ನಾಯ್ಕ ಅಲಗೇರಿ

ಅ0ಕೋಲಾ : ಕಳೆದ 10 ತಿಂಗಳ ಹಿಂದೆ ಪಟ್ಟಣದ ಕೋಟೆ ಮಾರುತಿ ದೇವಸ್ಥಾನದ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ. ಈ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ. ಇದರ ಹಿಂದೆ ನಮಗೆ ಅನುಮಾನವಿದೆ ಎಂದು ಮೃತರ ಪಾಲಕರು ಉತ್ತರ ಪ್ರದೇಶದಲ್ಲಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಅಲ್ಲಿಯ ಪೊಲೀಸ ತಂಡ ಅಂಕೋಲಾಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

       ಸಾವಿನ ಬಗ್ಗೆ ತೀವ್ರ ಸಂಶಯ ವ್ಯಕ್ತಪಡಿಸಿದ ಮೃತನ ಪಾಲಕರು ಉತ್ತರ ಪ್ರದೇಶದ ಯಕನಾ ಪೊಲೀಸ್ ಠಾಣೆಯಲ್ಲಿ ಸಾವಿಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದರು. ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳ ವಿಶೇಷ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಮರು ಪರಿಶೀಲನೆ ನಡೆಸಿದರು. ಮರೋಣೋತ್ತರ ಪರೀಕ್ಷೆಯ ವರದಿ ಸೇರಿದಂತೆ ಇನ್ನಿತರ ತಾಂತ್ರಿಕ ದಾಖಲೆಗಳನ್ನು ಸಹ ಅಧ್ಯಯನ ನಡೆಸಿತು. ಅಂಗಡಿಯ ಮಾಲಕರು ಹಾಗು ಇನ್ನಿತರ ಸಾಕ್ಷಿಗಳ ವಿಚಾರಣೆಯನ್ನು ತಂಡ ನಡೆಸಿತು. 

ಪ್ರಕರಣ ಏನಾಗಿತ್ತು..?

ನನ್ನನ್ನು ಬ್ಲಾಕಮೇಲ ಮಾಡಲಾಗುತ್ತಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಡಿಯೋ ಮಾಡಿಕೊಂಡು 3 ಸೆಪ್ಟಂಬರ್ 2022 ರಂದು ಪಟ್ಟಣದ ಕೋಟೆ ಮಾರುತಿ ದೇವಸ್ಥಾನದ ನಿರ್ಜನ ಪ್ರದೇಶ ನೇಣು ಬಿಗಿದುಕೊಂಡು ಕಾಕರಮಠದ ಬಿಗ್ ಬಾಸ್ ಸಲ್ಯೂನ್ನಲ್ಲಿ ಹೆರ್ ಕಟಿಂಗ್ ಕೆಲಸಕ್ಕಿದ್ದ ಉತ್ತರ ಪ್ರದೇಶ ಮೂಲದ ಸುಹೇಲ ಸಲಮಾನಿ (23) ಆತ್ಮಹತ್ಯೆಗೆ ಶರಣಾಗಿದ್ದ.

ಕಾಕರಮಠದ ಬಿಗ್ ಬಾಸ್ ಹೆರ್ ಕಟಿಂಗ್ ಸಲ್ಯೂನ್ನಲ್ಲಿ ಹೆರ್ ಕಟಿಂಗ್ ಕೆಲಸಕ್ಕಾಗಿ ಮೃತ ಸಲಮಾನಿ ಹಾಗೂ ಅವರ ಅಣ್ಣ ಸೇರಿ ಮೂವರು ಕಳೆಧ 3 ವರ್ಷದಿಂದ ಹೇರ್ ಕಟಿಂಗ್ ಕೆಲಸಕ್ಕಿದ್ದರು. ಇವರು ಸಲ್ಯೂನ್ನ ಮೇಲ ಮಹಹಡಿಯಲ್ಲಿ ವಾಸಗಿದ್ದರು. ರಾತ್ರಿ ಎಲ್ಲರೂ ಊಟ ಮಗಿಸಿ ಮಲಗಿದ್ದರು. ಬೆಳಿಗ್ಗೆ 6 ಗಂಟೆಯ ಸುಮಾರಿ ಸುಲಮಾನಿ ರೂಂನಿAದ ಹೊರ ನಡೆದು ಹೋಗಿದ್ದ ಎಂದು ಮೃತನ ಅಣ್ಣ ಪೊಲೀಸ್ ಹೇಳಿಕೆಯಲ್ಲಿ ತಿಳಿಸಿದ್ದ.

        ಬೆಳಿಗ್ಗೆ 9 ಗಂಟಗೆ ಶ್ರೀ ಕೋಟೆ ಮಾರುತಿ ದೇವಸ್ಥಾನಕ್ಕೆ ಹೋಗುವವರು ನೇಣು ಬಿಗಿದುಕೊಂಡು ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಅಂದು ಪಿಎಸೈ ಆಗಿದ್ದ ಮಹಾಂತೇಶ ವಾಲ್ಮೀಕಿ ಹಾಗೂ ಪ್ರವೀಣಕುಮಾರ ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪಿಎಸೈ ಮಹಾಂತೇಶ ವಾಲ್ಮೀಕಿ ಇದೊಂದು ಅಸ್ವಾಭಾವಿಕ ಸಾವು. ಪ್ರಕರಣದಲ್ಲಿ ಯಾವುದೇ ಸಂಶಯ ಇಲ್ಲ ಎಂದು ಪೈಲ ಕ್ಲೋಸ್ ಮಾಡಿದ್ದರು.

        ತನ್ನ ಮೋಬೈಲನಲ್ಲಿ ನನಗೆ (ಚುಪ್ ಚುಪಕೆ ವಿಡಿಯೋ ಬನತಾತಾ.) ನನ್ನನ್ನು ಕದ್ದು ಕದ್ದು ವಿಡಿಯೋ ಮಾಡಲಾಗುತ್ತಿತ್ತು. ಇದರಿಂದ ನಾನು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಮೂರು ವಿಡಿಯೋ ತುಣಕುಗಳುಗಳನ್ನು ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು. ವಿಡಿಯೋದಲ್ಲಿ ಯಾವ ವಿಷಯದಲ್ಲಿ ಕದ್ದು ಕದ್ದು ವಿಡಿಯೋ ಮಾಡಲಾಗುತ್ತಿತ್ತು ಎಂಬ ಬಗ್ಗೆ ಸ್ಪಷ್ಠತೆ ಇಲ್ಲವಾಗಿತ್ತು.

       ನಂತರ ಇತನ ಶವವನ್ನು ಉತ್ತರ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನಡೆಸಿದ್ದರು. ಇದಾದ ನಂತರ ಮೃತನ ಪಾಲಕರು ಅಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೃತನ ಪಾಲಕರು ಅಲ್ಲಿನ ಠಾಣೆಯಲ್ಲಿ ದೂರು ದಾಖಲಿಸಿದ್ದರಿಂದ ಈ ಪ್ರಕರಣದ ಜಾಲ ಹಿಡಿದು ಯುಪಿ ಪೊಲೀಸರು ಅಂಕೋಲಾಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.

ಆತ ಯಾವ ಒತ್ತಡದಿಂದಾಗಿ ಅಥವಾ ಯಾರ ಬಾಹ್ಯ ಪ್ರೇರಣೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ತನಿಖೆಯ ನಂತರವೇ ಹೊರಬರಬೇಕಿದೆ.