ಅಂಕೋಲಾ : ನೌಕಾ ಪಡೆಯ ವಜ್ರಕೋಶದ ಕಮಾಂಡಿಂಗ್ ಆಫೀಸರ್ ಆರ್.ಕೆ. ಸಿಂಗ್ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಕ್ರಿ ಗೌಡ ಮನೆಗೆ ಸೋಮವಾರ ಭೇಟಿ ನೀಡಿ ಸನ್ಮಾನಿಸಿ ಗೌರವಿಸಿದರು.

ಒಂದು ತಿಂಗಳ ಹಿಂದೆ ಬೇಲೆಕೇರಿಯ ನೇವಲ್ ಬೇಸ್ ನ ಐ.ಎನ್.ಎಸ್. ವಜ್ರಕೋಶನ ಕಮಾಂಡಿಂಗ್ ಆಫೀಸರ್ ಆಗಿ ನಿಯುಕ್ತಿಗೊಂಡಿರುವ ಇವರು ಇಲ್ಲಿನ ಸಂಸ್ಜ್ರತಿ, ಪರಂಪರೆಯ ಬಗ್ಗೆ ಕೂತುಹಲದಿಂದ ಅಧ್ಯಯನ ನಡೆಸಿದ್ದಾರೆ.

ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಅವರು ರಾಷ್ಟ್ರ ಮಟ್ಟದಲ್ಲಿ ತನ್ನ ಜಾನಪದ ಹಾಡುಗಳ ಮೂಲಕ ಜನಪ್ರೀಯತೆ ಗಳಿಸಿರುವದನ್ನ ಅರಿತ ಅವರು ಸುಕ್ರಿ ಗೌಡ ಅವರ ಮನೆಗೆ ಬಂದು ಕುಶಲೋಪರಿ ವಿಚಾರಿಸಿ, ಗೌರವಿಸಿದರು.

ಸುಕ್ರೀ ಗೌಡ ಅವರು ತಮ್ಮ ತಂಡದ ಸದಸ್ಯರೊಂದಿಗೆ ತಮ್ಮ ಜಾನಪದದ ಹಾಡುಗಳನ್ನು ಹಾಡಿ ತಮ್ಮ ಕಲೆಯನ್ನು ಅಧಿಕಾರಿಗಳ ಎದುರು ಪ್ರದರ್ಶಿಸಿ ಗಮನ ಸೆಳೆದರು.

ಸ್ನೇಹಜೀವಿ ಎಂದು ಹೆಸರು ಪಡೆದಿರುವ ವಜ್ರಕೋಶದ ಕಮಾಂಡಿಂಗ್ ಆಫೀಸರ್ ಆರ್.ಕೆ. ಸಿಂಗ್ ಅವರು
ಕತ್ಯವ್ಯಕ್ಕೆ ಹಾಜರಾದ ಕೆಲವೇ ದಿನಗಳಲ್ಲಿ ಸ್ಥಳೀಯ ಶಾಲೆಗಳಿಗೆ ಕಂಪ್ಯೂಟರ್ ನೀಡುವುದು, ಗಿಡ ನೆಡುವುದು ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.

ಆರ್ .ಕೆ.ಸಿಂಗ್ ಮಾತನಾಡಿ ಇಲ್ಲಿನ ಯುವಕರು ಹೆಚ್ಚಿನದಾಗಿ ವಿಧ್ಯಾಭ್ಯಾಸ ಪಡೆದವರೇ ಆಗಿರುವುದರಿಂದ ಉದ್ಯೋಗ ಕೊಡಿಸಲು ಹೆಚ್ಚಿನ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರವೀಶ್ ನಾಯ್ಕ, ಧನಂಜಯ ನಾಯ್ಕ ಹಾಗೂ ಭಾರತೀಯ ನೌಕಾನೆಲೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಮಾತನಾಡಿ ಈ ಭಾಗದಲ್ಲಿ ಬಹುತೇಕ ಜನ ದೇಶಕ್ಕಾಗಿ ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟು ಸಾರ್ಥಕತೆ ಮೆರೆದಿದ್ದಾರೆ. ಹಾಗಾಗಿ ಅವರ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ತಕ್ಕಂತೆ ಕನಿಷ್ಠ ಉದ್ಯೋಗವಾದರು ಸಿಗುವಂತೆ ಪ್ರಯತ್ನಿಸಿ ಎಂದು ಒತ್ತಾಯಿಸಿದರು.