ಕಾರವಾರ : ಪಟ್ಟಣದ ಕುಂಠಿ ಮಹಾಮ್ಮಾಯ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿಕೊಂಡು ಅಮಲಿನಲ್ಲಿ ಇದ್ದ ವ್ಯಕ್ತಿಯೊರ್ವನನ್ನು ನಗರ ಠಾಣೆಯ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮೂಲತ ಕಾರವಾರದ ಸಿದ್ದರವನಾದ, ಮುದಗಾದಲ್ಲಿ ಆಟೋಮೊಬೈಲ ಅಂಗಡಿಯಲ್ಲಿ ಕೆಲಸಕ್ಕಿರುವ ವಿಘ್ನೇಶ್ವರ ದಿನಕರ ಗೌಡ (೩೧) ಗಾಂಜಾ ಸೇವಿಸಿದ ಆರೋಪಕ್ಕೆ ಒಳಗಾಗಿದವನಾಗಿದ್ದಾನೆ.

ಶಹರ ಠಾಣೆಯ ಸಿಪಿಐ ಸಿದ್ದಪ್ಪ ಬಿಳಗಿ ಅವರಿಗೆ ವ್ಯಕ್ತಿಯೊರ್ವ ಪಟ್ಟಣದ ಕುಂಠಿ ಮಹಾಮ್ಮಾಯ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇದ್ದಾನೆ ಎಂಬ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ, ಕಾರ್ಯಪ್ರವೃತ್ತರಾದ ಸಿಪಿಐ ಸಿದ್ದಪ್ಪ ಬಿಳಗಿ ಸ್ಥಳಕ್ಕೆ ದಾವಿಸಿದ್ದರು.

ಸ್ಥಳದಲ್ಲಿ ಅಮಲಿನಲ್ಲಿ ಇದ್ದ ಆರೋಪದ ಮೇಲೆ ವಿಘ್ನೇಶ್ವರ ದಿನಕರ ಗೌಡ ಅವರನ್ನು ವಶಕ್ಕೆ ಪಡೆದು ಗಾಂಜಾ ಸೇವನೆಯ ಖಚಿತತೆಗೆ ಕಾರವಾರದ ವೈಧ್ಯಕೀಯ ಮಹಾವಿದ್ಯಾಲದಲ್ಲಿ ವೈಧ್ಯಕೀಯ ಪರೀಕ್ಷೆ ನಡೆಸಿದ್ದರು. ತಜ್ಞ ವೈದ್ಯರು ಆರೋಪಿ ಗಾಂಜಾ ಸೇವನೆ ಮಾಡಿದ್ದು ದೃಡಿಪಡಿಸಿ ವರದಿ ನೀಡಿದ ಹಿನ್ನಲೆಯಲ್ಲಿ, ಕಾರ್ಯಾಚರಣೆ ನಡೆಸಿದ್ದ ಸಿಪಿಐ ಸಿದ್ದಪ್ಪ ಬಿಳಗಿ ಅವರು ಮಾಧಕ ವಸ್ತು ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸರಕಾರದ ಪರವಾಗಿ ಠಾಣೆಯಲ್ಲಿ ದೂರು ನೀಡಿದ್ದರು. ಹವಾಲ್ದಾರ ಪ್ರಶಾಂತ ಕೊಠಾಲಕರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.