ಕಾರವಾರದ ತಾರಿವಾಡಾದಲ್ಲಿ ಅಂದರ ಬಾಹರದಲ್ಲಿ ತೊಡಗಿದ್ದ ಎಲೆಮಾನವರ ಬಂಧನ

ಕಾರವಾರ : ಚಿತ್ತಾಕುಲ ಠಾಣೆಯ ವ್ಯಾಪ್ತಿಯ ಸದಾಶಿವಗಡದ ತಾರಿವಾಡಾದಲ್ಲಿ ಅಂದರ ಬಾಹರ ಆಡದಲ್ಲಿ ತೊಡಗಿದ್ದ ಎಲೆ ಮಾನವರನ್ನು ಪಿಎಸೈ ಮಹಾಂತೇಶ ವಾಲ್ಮೀಕಿ ನೇತ್ರತ್ವದ ತಂಡ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.

ಸದಾಶಿವಗಡದ ತಾರಿವಾಡಾದವರಾದ ಮನೋಜ ಗೋಪಾಲ ಕಲ್ಗುಟಕರ (ಆಚಾರಿ)(33), ಶಂಕರಪ್ಪ ಹನುನಂತ ಹಿರೆಮನ್ನಾಪುರ(ಆಚಾರಿ)(33), ಮಲ್ಲಾಪುರದ ಗಾಂಧಿನಗರದ ಶೇಖರ ಉದಯ ಕಲ್ಗುಟಕರ (58), ಸದಾಶಿಗಡದ ಓಂ ಹೊಟೇಲ ಎದುರಿನ ನೇತಾಜಿ ಕಾಳು ಗೋಸಾವಿ (33), ಸದಾಶಿವಗಡದ ಅಮಿತ ಲಕ್ಷö್ಮಣ ಮುನಿಯಾನಿ(37) ಬ0ಧಿತ ಆರೋಪಿಗಳು.

 ಬಂಧಿತರಿ0ದ 4630 ರೂ ನಗದು ಸೇರಿದಂತೆ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಠಾಣೆಯ ಎಸೈ ವಿನ್ಸೆಂಟ್ ಪರ್ನಾಂಟಿಸ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.