ಅಂಕೋಲಾ : ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕುಗ್ರಾಮಗಳಾದ ಮಲ್ಲಾಣಿ, ಹೆಗ್ಗರಣೆ – ಕೊಟೆಬಾವಿ, ಶೇವೆಗುಳಿ, ಶಿಕ್ಲಿತೊರ್ಲಿ ಗ್ರಾಮಗಳು ಜನವಸತಿ ಇರುವ ಕುಗ್ರಾಮಗಳಾಗಿದ್ದು, ಪಂಚಾಯತಿ ಕೇಂದ್ರಸ್ಥಾನದಿಂದ ಕನಿಷ್ಠ 28 ಕಿ.ಮೀ ದೂರದಲ್ಲಿದ್ದು, ಈ ಗ್ರಾಮಗಳಿಗೆ ಸಂಪರ್ಕಕಲ್ಪಸುವ ರಸ್ತೆಯ ದೊಡ್ಡಹಳ್ಳಕ್ಕೆ ಸೇತುವೆ ಇಲ್ಲದೇ ವರ್ಷದಲ್ಲಿ ಆರು ತಿಂಗಳು ಗ್ರಾಮದ ಸಂಪರ್ಕಕಡಿತವಾಗುವುದರಿಂದ ಅಲ್ಲಿಯ ನಿವಾಸಿಗಳಿಗೆ ಮೂಲಭೂತ ಅವಶ್ಯಕತೆಗೆ ಬೇಕಾದ ಜೀವನಾವಶ್ಯದ ಆಹಾರಸಾಮಗ್ರಿ, ವೈಧ್ಯಕಿಯ ಸೇವೆ, ಶಿಕ್ಷಣಕ್ಕೆ ಸದ್ರಿ ಗ್ರಾಮದ ಜನತೆಗೆ ತೀರಾ ಸಮಸ್ಯೆಯಾಗುತ್ತದೆ. ಹೀಗಾಗಿ ಶಾಸಕರು ತಕ್ಷಣ ಸ್ಪಂದಿಸಿ ದೊಡ್ಡಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಹಟ್ಟಿಕೇರಿ ಗ್ರಾಮ ಪಂಚಾಯತನ ಸಮಸ್ತ ನಾಗರಿಕರ ಪರವಾಗಿ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ರಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಟ್ಟಿಕೇರಿಯ ನಿವಾಸಿಗಳಾದ ನಿತ್ಯಾನಂದ ಆರ್ ನಾಯ್ಕ, ಮಾವಿನಕೇರಿ,ರವಿ ವಿ ನಾಯ್ಕ, ದಿಗಂಬರ ಆರ್ ನಾಯ್ಕ,ಷಣ್ಮುಖ ಎಮ್ ನಾಯ್ಕ, ವಿಕ್ರಮ್ ಎಲ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.