ಅಂಕೋಲಾದಲ್ಲಿ ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕಿಯ ಪ್ರಾಣಿ ಪ್ರೀತಿ

ಮುಖಕ್ಕೆ ಸಿಕ್ಕಿ ಕೊಂಡಿದ್ದ ಡಬ್ಬ ತೆಗೆದು, ನಾಯಿಗೆ ಜೀವದಾನ ಮಾಡಿದ ಚಾಲಕ -ನಿರ್ವಾಹಕಿ

ರಾಘು ಕಾಕರಮಠ.

ಅಂಕೋಲಾ : ಬೀದಿ ನಾಯಿಯೊಂದರ ಮುಖಕ್ಕೆ ಪ್ಲಾಸ್ಟಿಕ್ ಡಬ್ಬಿಯೊಂದು ಸಿಕ್ಕಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಸಂದರ್ಭದಲ್ಲಿ  ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕಿ  ನಾಯಿಗೆ ಡಬ್ಬಿಯಿಂದ ಮುಖ ತೆಗೆಸಿ ಮಾನವೀಯತೆ ಮೆರೆದ ಘಟನೆ ಬೆಳಂಬಾರದಲ್ಲಿ ನಡೆದಿದೆ.

ಬಸ್ ಚಾಲಕ ಆನಂದು ಹುಲಸ್ವಾರ ಹಾಗೂ ನಿರ್ವಾಹಕಿ ರಾಜಮ್ನ ಅವರ ಈ ವಿದಾಯಕ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ ಆಗಿದ್ದು, ಎಲ್ಲಡೆಯಿಂದ ಪ್ರಶಂಸೆಯ ಮಾತುಗಳು ಕೇಳಿಬಂದಿದೆ. 

ನಡೆದದ್ದೇನು..?

ಬೆಳಂಬಾರದ ರಸ್ತೆಯಲ್ಲಿ ಬೀದಿ ನಾಯಿಯೊಂದು ಮುಖಕ್ಕೆ ಪ್ಲಾಸ್ಟಿಕ್ ಡಬ್ಬಿ ಸಿಲುಕಿಸಿಕೊಂಡು  ನರಳಾಟ ನಡೆಸಿತ್ತು. ಮುಖವನ್ನು ಡಬ್ಬಿಯಿಂದ ಬಿಡಿಸಿಕೊಳ್ಳಲು ನಾಯಿ ಸಾಕಷ್ಟು ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ. ಸುಮಾರು ಬಾರಿ ಡಬ್ಬಿಯಿಂದ ತಲೆಯನ್ನಯ ಹೊರಗಡೆ ತೆಗೆಯಲು ಪ್ರಯತ್ನ ಮಾಡಿದೆ. ಸತತ ಪ್ರಯತ್ನದ ಹೊರತಾಗಿಯೂ ತಲೆಯಿಂದ ಡಬ್ಬ ತೆಗೆಯಲಾಗದೇ ಶ್ವಾನ ಪರಿತಪಿಸಿದೆ. ನಿತ್ರಾಣಗೊಂಡ ಶ್ವಾನ ಕಣ್ಣು ಕಾಣದಾಗಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುವ ದೃಶ್ಯ ಮನ ಕಲುಕುವಂತಿತ್ತು. 

ಅಂಕೋಲಾದಿಂದ ಬೆಳಂಬಾರಕ್ಕೆ  ಸಾರಿಗೆ ಬಸನಲ್ಲಿ ಪ್ರಯಾಣಿಕರು ಸಾಗಿದ್ದರು‌. ಈ ವೇಳೆ ರಸ್ತೆ ಮಧ್ಯ ಬಂದು ನಾಯಿ ಯಾತನೆ ಅನುಭವಿಸುತ್ತ ನಿಂತಿತ್ತು. ಇದನ್ನು ಕಂಡ ಸಾರಿಗೆ ಬಸ್ ಚಾಲಕ ಆನಂದು ಹುಲಸ್ವಾರ ಹಾಗೂ ನಿರ್ವಾಹಕಿ ರಾಜಮ್ನಾ ಬಸ್ಸನ್ನ ರಸ್ತೆಯಲ್ಲೆ ನಿಲ್ಲಸಿ ನಾಯಿಗೆ ಜೀವದಾನ ನೀಡಲು ಮುಂದಾಗಿದ್ದಾರೆ.

ಅತ್ಯಂತ ಜಾಗುರುಕತೆಯಿಂದ ನಾಯಿಗೂ ತೊಂದರೆಯಾಗದಂತೆ ನಾಯಿಗೆ ಡಬ್ಬಿಯಿಂದ ಮುಖವನ್ನು ಮುಕ್ತಿಗೊಳಿಸಿದ್ದಾರೆ.

ಶ್ವಾನ ಪರಿದಾಡಿದ ಈ ಮನಕಲುಕುವ  ದೃಶ್ಯವನ್ನ ನಮ್ಮಿಂದ ನೋಡಲಾಗಲಿಲ್ಲ. ನಾಯಿ ಕೂಡ ಒಂದು ಜೀವವಲ್ಲವೆ. ಸಿಲುಕಿ ಹಾಕಿಕೊಂಡ ಡಬ್ಬಿಯನ್ನು ನಾಯಿಯ ಕೊರಳಿಂದ ತೆಗೆಯುವಾಗ ನಮಗೂ ಭಯ ಕಾಡಿತ್ತು. ಆದರೆ  ಅದರ ಜೀವ ರಕ್ಷಣೆ ಮಾಡಲೆ ಬೇಕು ಎಂಬ ಉದ್ದೇಶ ನಮ್ಮಲ್ಲಿ ಇರೋದರಿಂದ ಆ ಭಯವು ಆ ಸಮಯದಲ್ಲಿ ನಮಗೆ ಕಂಡು ಬಂದಿಲ್ಲ ನಾಯಿಯ ಪ್ರಾಣ ರಕ್ಷಿಸಿದ   ಚಾಲಕ ಆನಂದು ಹುಲಸ್ವಾರ ಹಾಗೂ ನಿರ್ವಾಹಕಿ ರಾಜಮ್ಮಾ ಪ್ರತಿಕೃಯಿಸಿದ್ದಾರೆ.