ವರ್ಗಾವಣೆಗೊಂಡ ಜನಮೆಚ್ಚಿದ ಶಿಕ್ಷಕಿ ಸೀಮಾ ಉಮೇಶ ನಾಯ್ಕರಿಗೆ ಸನ್ಮಾನ
ಅಂಕೋಲಾ : ಕಳೆದ 25 ವರ್ಷಗಳ ಕಾಲ ಶೇಡಿಕುಳಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ, ಜನಮೆಚ್ಚಿದ ಶಿಕ್ಷಕಿಯಾಗಿದ್ದ ಸೀಮಾ ಉಮೇಶ ನಾಯ್ಕ ಅವರು ಅಜ್ಜಿಕಟ್ಟಾದ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಊರ ನಾಗರಿಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ ಪಿ ನಾಯ್ಕ ಮಾತನಾಡಿ ಸೃಜನಶೀಲ ಶಿಕ್ಷಕಿ ಸೀಮಾ ಉಮೇಶ ನಾಯ್ಕ ಅವರು ಉತ್ತಮವಾಗಿ ಕರ್ತವ್ಯಬದ್ಧತೆಯಿಂದ ಸೇವೆ ಮಾಡಿ ತಮ್ಮ ವೃತ್ತಿ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಇತಂಹ ಅಪರೂಪ ಶಿಕ್ಷಕಿ ನಮ್ಮ ಹೆಮ್ಮೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕಿ ಸವಿತಾ ಕಾಮತ, ಸೀಮಾ ನಾಯ್ಕ ಅವರ ಪತಿ ನ್ಯಾಯವಾದಿ ಉಮೇಶ ನಾಯ್ಕ, ಊರ ನಾಗರಿಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
